ಕತಾರ್ (ಕುಲಾಲ ವರ್ಲ್ಡ್ ಡಾಟ್ ಕಾಮ್): ಗಲ್ಫ್ ರಾಷ್ಟ್ರ ದೋಹಾ ಕತಾರಿನಲ್ಲಿ ನೆಲೆಸಿರುವ ಸಮಾನಮನಸ್ಕರ ಸಮುದಾಯ ಕೂಟ `ದೋಹಾ ಕುಲಾಲ್ಸ್ ‘ ಇದರ ವಾರ್ಷಿಕ ವಿಹಾರಕೂಟ ಇತ್ತೀಚೆಗೆ ದೋಹಾದ ಮುನ್ತಾಝ ಪಾರ್ಕ್ (Rawdat Al Khail Park) ಇಲ್ಲಿ ಯಶಸ್ವಿಯಾಗಿ ಜರುಗಿತು.
ಕತಾರಿನಲ್ಲಿ ಹಲವು ವರ್ಷಗಳಿಂದ ಉದ್ಯೋಗದಲ್ಲಿದ್ದು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿರುವ ಆನಂದ ಕುಂಬಾರ್ – ಜಯಲಕ್ಷ್ಮೀ ದಂಪತಿಯ ಮುತುವರ್ಜಿಯಲ್ಲಿ ನಡೆದ ವಿಹಾರಕೂಟದಲ್ಲಿ ಹಲವು ಮಂದಿ ಕುಟುಂಬ ಸಮೇತರಾಗಿ ಉತ್ಸಾಹದಿಂದ ಭಾಗವಹಿಸಿ ದಿನವನ್ನು ಅವಿಸ್ಮರಣೀಯಗೊಳಿಸಿದರು. ಕೂಟದ ಸಕ್ರಿಯ ಸದಸ್ಯರಾದ ಶಮಿತಾ ರವಿ ಕುಲಾಲ್ ಕೋಡಂದೂರು, ಅರ್ಚನಾ ಸತೀಶ್ ಬಂಗೇರ ಕೊಲ್ಯ ಅವರ ನೇತೃತ್ವದಲ್ಲಿ ಮಕ್ಕಳಿಗೆ ಹಾಗೂ ಹಿರಿಯರಿಗೆ ವಿವಿಧ ಮನರಂಜನಾ ಚಟುವಟಿಕೆಗಳನ್ನು ಆಯೋಜಿಸಲಾಗಿದ್ದು ಎಲ್ಲರೂ ಉತ್ಸಾಹದಿಂದ ಭಾಗವಹಿಸಿ ದಿನವನ್ನು ಸಂತೋಷದಿಂದ ಕಳೆದರು. ಕೂಟದ ಸಕ್ರಿಯ ಸದಸ್ಯರಾದ ಮನೋಜ್ ಕುಲಾಲ್ ಹಾಗೂ ಶ್ರುತಿ ಅವರ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಮಧ್ಯಾಹ್ನದ ವಿಶೇಷ ಪ್ರೀತಿ ಭೋಜನವನ್ನು ಏರ್ಪಡಿಸಿದ್ದರು. ಕಾರ್ಯಕ್ರಮ ಆಯೋಜನೆಯಲ್ಲಿ ಸಂಘದ ಪ್ರತಿಯೊಬ್ಬರೂ ಸದಸ್ಯರು ಉತ್ಸಾಹದಿಂದ ಸಹಕರಿಸಿದರು.


