ಬಂಟ್ವಾಳ(ಕುಲಾಲ ವರ್ಲ್ಡ್ ಡಾಟ್ ಕಾಮ್) : ಕರ್ನಾಟಕ ಸರಕಾರ ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ಆಶ್ರಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ 17ರ ವಯೋಮಿತಿಯ ಬಾಲಕಿಯರ ಕರಾಟೆ ಸ್ಪರ್ದೆಯಲ್ಲಿ ಬಂಟ್ವಾಳ ವಿದ್ಯಾಗಿರಿ ಎಸ್.ವಿ.ಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿ ವಿಧ್ಯಾರ್ಥಿನಿ ಸಾನ್ವಿ.ಕೆ. ರವರು ಪ್ರಥಮ ಸ್ಥಾನದೊಂದಿಗೆ ಗೋಲ್ಡ್ ಮೆಡಲ್ ಮತ್ತು ಪ್ರಮಾಣ ಪತ್ರ ಪಡೆದಿರುತ್ತಾರೆ ಮತ್ತು ಉತ್ತರ ಪ್ರದೇಶದಲ್ಲಿ ನಡೆಯುವ ರಾಷ್ರ್ಟಮಟ್ಟದ ಕರಾಟೆ ಸ್ಪರ್ದೆಗೆ ಆಯ್ಕೆಯಾಗಿರುತ್ತಾರೆ.
ಈಕೆ ರಾಜ್ಯ ಗುಪ್ತ ವಾರ್ತಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೃಷ್ಣ ಕುಲಾಲ್ ಮತ್ತು ಅಶ್ವಿನಿ ದಂಪತಿ ಪುತ್ರಿ. ಅಶೋಕ್ ಆಚಾರ್ಯ ಬಂಟ್ವಾಳ ಇವರು ಈಕೆಯ ಕರಾಟೆ ಗುರುವಾಗಿರುತ್ತಾರೆ.

