ರಾಜ್ಯದ ಕುಂಬಾರರಿಗೆ ರಾಜಕೀಯದ ಭಿಕ್ಷೆ ಬೇಡ : ಡಾ.ಎಂ.ಅಣ್ಣಯ್ಯ ಕುಲಾಲ್
ಬೆಂಗಳೂರು : `ರಾಜ್ಯದ ಕುಂಬಾರರಿಗೆ ರಾಜಕೀಯದ ಭಿಕ್ಷೆ ಬೇಡ. ಆತ್ಮ ಗೌರವದ ಸಾಮಾಜಿಕ ನ್ಯಾಯದ ರಾಜಕೀಯದ ಸ್ಥಾನಮಾನ ಬೇಕು. ಇದು ರಾಜ್ಯದ 25 ಲಕ್ಷ ಕುಂಬಾರರ ಹಕ್ಕೊತ್ತಾಯವಾಗಿದೆ’ ಎಂದು ರಾಜ್ಯದ ಕುಂಬಾರ ಸಮುದಾಯದ ನಾಯಕ ಡಾ.ಎಂ.ಅಣ್ಣಯ್ಯ ಕುಲಾಲ್ ಅವರು ರಾಜಕೀಯ ಪಕ್ಷಗಳಿಗೆ ಕರೆ ಕೊಟ್ಟರು.
ಅವರು ಇತ್ತೀಚೆಗೆ ಬೆಂಗಳೂರಿನ ಉತ್ತರಹಳ್ಳಿ ರಸ್ತೆಯ ಲಕ್ಷ್ಮೀ ವಲ್ಲಭ ಕಲ್ಯಾಣ ಮಂಟಪದಲ್ಲಿ ಜರುಗಿದ ಕರ್ನಾಟಕ ರಾಜ್ಯಕುಂಬಾರರ ಮಹಾಸಂಘದ ತ್ರೈ ವಾರ್ಷಿಕ ಮಹಾಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಯ್ಕೆಯಾಗಿ ಬಂದಿರುವ ರಾಜ್ಯ ನಿರ್ದೇಶಕರುಗಳಿಗೆ ಸೇವಾ ಬದ್ಧತೆಯ ಪ್ರತಿಜ್ಞಾವಿಧಿ ಭೋದಿಸಿ ಮಾತನಾಡಿದರು.
ರಾಜ್ಯ ಅದ್ಯಕ್ಷರಾದ ಶಿವಕುಮಾರ್ ಚೌಡ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ರಾಜ್ಯ ಕಾರ್ಯಕಾರಿ ಮಂಡಳಿ, ಮಹಿಳಾ ಮಂಡಳಿ ಹಾಗೂ ಕುಂಬಾರ ಯುವವೇದಿಕೆಯ ಸಮಿತಿಯನ್ನು ರಚಿಸಲಾಯಿತು. ಚುನಾವಣಾಧಿಕಾರಿಯಾಗಿ ತಿಮ್ಮ ಸೆಟ್ಟಿ ಮೈಸೂರು ಸಹಕರಿಸಿದರು.
ಕುಂಬಾರ ಸಮುದಾಯದ ರಾಜ್ಯ ಮುಖಂಡರುಗಳಾದ ನಾಗರಾಜ್ ಟಿ. ಎಲ್, ದಕ್ಷಿಣಾ ಮೂರ್ತಿ, ಶ್ರೀನಿವಾಸ್ , ಜಯಕೃಷ್ಣ, ಡಿ ವಿ ಆರ್ ಸ್ವಾಮಿ, ರಾಜಶೇಖರ್ , ಬಸಣ್ಣ ಕುಂಬಾರ, ತೇಜಸ್ವೀರಾಜ್, ಸಿ.ಎಂ.ಮರಿಯಪ್ಪ , ರಂಗ ಸೆಟ್ಟಿ ಹಾಸನ, ರಾಮಣ್ಣ ಉಡುಪಿ, ಪದ್ಮ ಕುಮಾರ್ ಬೆಳ್ತಂಗಡಿ, ಮುತ್ತಮ್ಮ ಮಡಿಕೇರಿ, ಬಾಬುರಾವ್ ಕುಂಬಾರ ಬೀದರ್, ಶೇಕರಪ್ಪ ಯಾದಗಿರಿ, ರೇಖಾ ಕುಂಬಾರ ಗುಲ್ಬರ್ಗ, ಹುಲಗಪ್ಪ ,ರಾಮಸ್ವಾಮಿ ಬಳ್ಳಾರಿ, ತಿಪ್ಪೇ ಸ್ವಾಮಿ, ಲಿಂಗರಾಜು ಚಿತ್ರದುರ್ಗ, ತುಳಸೀ ದಾಸ್ ಕಾರವಾರ, ಶಶಿಕಲಾ ಶಿವಕುಮಾರ್, ಸದಾನಂದ ಬೆಂಗಳೂರು ಮುಂತಾದ ರಾಜ್ಯದ ನೂರಾರು ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.
ಕರಾವಳಿಯಿಂದ ಕರ್ನಾಟಕ ರಾಜ್ಯ ಕುಂಬಾರ ಸಂಘಕ್ಕೆ ಮುಂದಿನ 5ವರ್ಷಗಳ ಕಾಲ ಸೇವೆ ಸಲ್ಲಿಸಲು ಆಯ್ಕೆಯಾದ ನಾಯಕರ ವಿವರ :
ಹಿರಿಯ ಸಲಹೆಗಾರರು: ಡಾ.ಎಂ.ವಿ.ಕುಲಾಲ್, ಎಂ.ಆರ್.ನಾರಾಯಣ, ಪದ್ಮಕುಮಾರ್ ಬೆಳ್ತಂಗಡಿ.
ರಾಜ್ಯ ಆಡಳಿತ ಕಮಿಟಿಗೆ: ಡಾ.ಎಂ.ಅಣ್ಣಯ್ಯ ಕುಲಾಲ್ (ದ.ಕ ಜಿಲ್ಲೆ ಯಿಂದ ಚುನಾಯಿತ ರಾಜ್ಯ ಕಾರ್ಯಾಧ್ಯಕ್ಷರಾಗಿ ಪುನರಾಯ್ಕೆ).
ರಾಮ ಕುಲಾಲ್ ಪೆರ್ಡೂರು (ಉಡುಪಿ ಜಿಲ್ಲೆ ಯಿಂದ ಚುನಾಯಿತ) ರಾಜ್ಯ ಉಪಾದ್ಯಕ್ಷರಾಗಿ ಆಯ್ಕೆ.
ತೇಜಸ್ವೀರಾಜ್ (ಯುವ ವೇದಿಕೆಯಿಂದ ಚುನಾಯಿತ) ರಾಜ್ಯ ಕುಂಬಾರರ ಯುವವೇದಿಕೆಯ ಗೌರವಾದ್ಯಕ್ಷರಾಗಿ ಆಯ್ಕೆ.
ಪದ್ಮಕುಮಾರ್ ಬೆಳ್ತಂಗಡಿ (ಸಲಹಾ ಸಮಿತಿಯಿಂದ ಆಯ್ಕೆ) ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ದ. ಕ ಜಿಲ್ಲಾ ಉಸ್ತುವಾರಿ.
ರಾಜ್ಯ ಕುಂಬಾರರ ಯುವವೇದಿಕೆ
ತೇಜಸ್ವೀ ರಾಜ್, ರಾಜ್ಯ ಗೌರವಾದ್ಯಕ್ಷರು, ಕರಾವಳಿ ವಿಭಾಗ ಉಸ್ತುವಾರಿ.
ಸದಾನಂದ ಬೆಂಗಳೂರು, ರಾಜ್ಯ ಉಪಾದ್ಯಕ್ಷರು.
ಶಂಕರ ಕುಲಾಲ್ ಪೆರಂಪಳ್ಳಿ , ರಾಜ್ಯ ಉಪಾದ್ಯಕ್ಷರು. ಉಡುಪಿ ಜಿಲ್ಲಾ ಉಸ್ತುವಾರಿ.
ಹರೀಶ್ ಕಾರಿಂಜ ಬೆಳ್ತಂಗಡಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ದ.ಕ ಉಸ್ತುವಾರಿ.
ಕರ್ನಾಟಕ ರಾಜ್ಯ ಕುಂಬಾರರ ಮಹಿಳಾ ವಿಭಾಗ
ಶ್ರೀಮತಿ ಪುಷ್ಪ ಸದಾನಂದ ಗೌರವಾದ್ಯಕ್ಷರು
ಶ್ರೀಮತಿ ಮಮತಾ ಎ.ಕುಲಾಲ್ , ರಾಜ್ಯ ಸಂಘಟನಾ ಕಾರ್ಯದರ್ಶಿ
ಹಾಗು ಕರಾವಳಿ ವಿಭಾಗ ಉಸ್ತುವಾರಿ.
ಶ್ರೀಮತಿ ಯಶೋಧ ಬಂಟ್ವಾಳ, ರಾಜ್ಯ ಉಪಾದ್ಯಕ್ಷರು ಹಾಗು ದ.ಕ ಜಿಲ್ಲಾ ಉಸ್ತುವಾರಿ.
ಶ್ರೀಮತಿ ಶಾಂಭವಿ ಎಸ್ ಕುಲಾಲ್ ಪೆರ್ಡೂರು, ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗು ಉಡುಪಿ ಜಿಲ್ಲಾ ಉಸ್ತುವಾರಿ.