ಬಂಟ್ವಾಳ(ಕುಲಾಲ ವರ್ಲ್ಡ್ ಡಾಟ್ ಕಾಮ್) : ತಾಲೂಕು ಕುಲಾಲ ಸುಧಾರಕ ಸಂಘ (ರಿ)ಇದರ ವಾರ್ಷಿಕೋತ್ಸವ ಸಮಾರಂಭ ಹಾಗೂ 44ನೇ ವಾರ್ಷಿಕ ಮಹಾಸಭೆಯು ಮೇ 26ರಂದು ಭಾನುವಾರ ಬೆಳಿಗ್ಗೆ 11.30ಕ್ಕೆ ಕುಲಾಲ ಸಮುದಾಯ ಭವನದಲ್ಲಿ ನಡೆಯಲಿದೆ.
ಬೆಳಿಗ್ಗೆ 44ನೇ ವಾರ್ಷಿಕ ಮಹಾಸಭೆಯು ನಡೆದು ಬಳಿಕ ಮಧ್ಯಾಹ್ನ ವಾರ್ಷಿಕೋತ್ಸವದ ಸಮಾರಂಭ ನಡೆಯಲಿದೆ, 2.30ರಿಂದ ಸಂಘದ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಉಪಾಧ್ಯಕ್ಷ ಜಯರಾಜ್ ಪ್ರಕಾಶ್, ನಿವೃತ್ತ ಆಹಾರ ಶಿರಸ್ತೆದಾರ ಎನ್. ಶ್ರೀನಿವಾಸ, ಹರೀಶ್ ಮೂಲ್ಯ ಬಿಜೈ, ರಾಜೇಶ್ ಎಂ. ಭಾಗವಹಿಸಲಿದ್ದಾರೆ. ವಿವಿಧ ಕುಲಾಲ ಸಂಘಗಳ ಅಧ್ಯಕ್ಷರು ಉಪಸ್ಥಿತರಿರುವರು. ಕಾರ್ಯಕ್ರಮದಲ್ಲಿ ಕಟ್ಟಡ ಸಮಿತಿ ಅಧ್ಯಕ್ಷ ಕೃಷ್ಣ ಬಿ. ಅವರಿಗೆ ಕುಲಾಲ ರತ್ನ ಪ್ರಶಸ್ತಿ ಪ್ರದಾನ ನಡೆಯಲಿರುವುದು. ಹಾಗೂ ಸಂಘದ ಹಿಂದಿನ ಪದಾಧಿಕಾರಿಗಳ ಪಟ್ಟಿ ಅನಾವರಣ ಗೊಳ್ಳಲಿರುವುದು. ಆದಿನ ಬೆಳಿಗ್ಗೆ ಸ್ವಜಾತಿ ಬಾಂದವರಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ.ಸಂಜೆ ಸಾಂಸ್ಕೃತಿಕ ವೈವಿದ್ಯಮಯ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ 19 ವಾರ್ಷಿಕ ಕ್ರೀಡಾಕೂಟ :
ವಾರ್ಷಿಕ ಕ್ರೀಡಾಕೂಟ ಮೇ 19ರಂದು ಆದಿತ್ಯವಾರ ಬೆಳಿಗ್ಗೆ 9 ರಿಂದ ಪೊಸಳ್ಳಿಯ ಕುಲಾಲ ಸಮುದಾಯ ಭವನದಲ್ಲಿ ನಡೆಯಲಿರುವುದು.ಕ್ರೀಡಾಕೂಟವನ್ನು ಬಿಎಸ್ಎನ್ಎಲ್ನ ನಿವೃತ್ತ ಸಬ್ಡಿವಿಜನಲ್ ಇಂಜಿನಿಯರ್ ಪಿ. ಜನಾರ್ದನ ಬಂಗೇರ ಮಾರ್ನಬೈಲು ಉದ್ಘಾಟಿಸುವರು. ಸಂಘದ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಚೆನ್ನಕೇಶವ, ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಹರೀಶ್ ಕುಲಾಲ್, ಸೇಸಪ್ಪ ಪೊಸಳ್ಳಿ ಭಾಗವಹಿಸುವರು. ಬೆಳಿಗ್ಗಿನಿಂದ ಸಂಜೆಯವರೆಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ.