
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2023-24ನೇ ಶೈಕ್ಷಣಿಕ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಸಂತ ಅಲೋಶಿಯಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪ್ರಾಪ್ತಿ ಸಾಲ್ಯಾನ್ ಅವರು ವಿಜ್ಞಾನ (ಪಿಸಿಎಂಸಿ) ವಿಭಾಗದಲ್ಲಿ 95.83% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ದೇರೆಬೈಲ್ ಕೊಂಚಾಡಿ ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್ ನ ನಿವಾಸಿ ಅನಿಲ್ ಸಾಲ್ಯಾನ್ ಮತ್ತು ಪ್ರಮೀಳಾ. ಎ. ಸಾಲ್ಯಾನ್ ದಂಪತಿಯ ಸುಪುತ್ರಿ.

