
ಕಟೀಲು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2023-24ನೇ ಶೈಕ್ಷಣಿಕ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಕಟೀಲು ಎಸ್ ಡಿಪಿಟಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪ್ರೇಕ್ಷಾ ಅವರು ವಾಣಿಜ್ಯ ವಿಭಾಗದಲ್ಲಿ 85.83% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಆದ್ಯಪಾಡಿ ಆದಿನಾಥೇಶ್ವರ ದೇವಳ ಸಮೀಪದ ನಿವಾಸಿ ಲೀಲಾಧರ್ ಮೂಲ್ಯ ಹಾಗೂ ಹರಿಣಾಕ್ಷಿ ದಂಪತಿಯ ಸುಪುತ್ರಿ.

