
ಪುತ್ತೂರು((ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2023-24ನೇ ಶೈಕ್ಷಣಿಕ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಪುತ್ತೂರು ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಮಧುಶ್ರೀ ಅವರು ವಿಜ್ಞಾನ ವಿಭಾಗದಲ್ಲಿ 93% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಬಂಟ್ವಾಳ ಭಾರತೀಯ ಜೀವ ವಿಮಾ ನಿಗಮ ಉದ್ಯೋಗಿ ಸದಾಶಿವ ನೆಕ್ಕರೆ ಮತ್ತು ಮತ್ತು ಭಾರತಿ ದಂಪತಿಯ ಸುಪುತ್ರಿ.

