ಮಂಗಳೂರು: ಹೋಂಗಾರ್ಡ್ ಪದ್ಮಾವತಿ ಕುಲಾಲ್ ರಂಥವರು ಕೇರಿಗೊಬ್ಬರು ಇದ್ದರೆ ಹೊಂಡಗಳಿಂದ ತುಂಬಿದ ರಸ್ತೆ ಮಾಯ, ಟ್ರಾಫಿಕ್ ಪ್ರಾಬ್ಲಮ್ಮೂ ಮಾಯ. ಇಷ್ಟಕ್ಕೂ ಈಕೆ ಮಾಡಿದ್ದ ಮಹಾನ್ ಕಾರ್ಯದ ಸ್ಟೋರಿ ಇಲ್ಲಿದೆ ಓದಿ..
ರಾಷ್ಟ್ರೀಯ ಹೆದ್ದಾರಿ 66 ರಲ್ಲಿದ್ದ ಗುಂಡಿಯನ್ನು ಯಾರ ಸಹಾಯವೂ ಇಲ್ಲದೇ ಏಕಾಂಗಿಯಾಗಿ ತುಂಬಿದ ಮಂಗಳೂರಿನ ಹೋಂ ಗಾರ್ಡ್ ಒಬ್ಬರು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಪ್ರಾಮಾಣಿಕವಾಗಿ ಕರ್ತವ್ಯ ಎಸಗದ ಎಂಜಿನಿಯರ್ ಗಳು ತಲೆತಗ್ಗಿಸುವಂತೆ ಮಾಡಿದ್ದಾರೆ.
ಹೌದು..ಪದ್ಮಾವತಿ ಕುಲಾಲ್ (೨೧ವರ್ಷ) ಎಂಬ ಹೋಂ ಗಾರ್ಡ್, ಪ್ರಯಾಣಿಕರಿಗೆ ಸಂಚಾರದ ವೇಳೆ ಯಾವುದೇ ತೊಂದರೆಯಾಗದಂತೆ ನಿಗಾವಹಿಸಿ, ಸಮಾಜ ಸೇವೆ ಮಾಡಿ ಎಲ್ಲರ ಶ್ಲಾಘನೆ ಪಡೆದಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿಯೂ ಇವರ ಕೆಲಸಕ್ಕೆ ಭಾರೀ ಹೊಗಳಿಕೆ ದೊರೆತಿದೆ.
ಕುಳಾಯಿಯ ಕೋಡಿಕೆರೆಯವರಾದ ಪದ್ಮಾವತಿ ಕುಲಾಲ್ ಕಳೆದ ವರ್ಷವಷ್ಟೇ ಹೋಂಗಾರ್ಡ್ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು. ಇತ್ತೀಚಿಗೆ ಸಂಚಾರ ನಿಯಂತ್ರಣಕ್ಕೆ ನಿಯೋಜನೆಗೊಂಡಿದ್ದರು. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸುಮಾರು ದಿನಗಳ ಹಿಂದೆ ಒಂದು ಗುಂಡಿ ನಿರ್ಮಾಣವಾಗಿತ್ತು. ಈ ಗುಂಡಿಯಿಂದ ಬೈಕಂಪಾಡಿ ಇಂಡಸ್ಟ್ರೀಯಲ್ ಏರಿಯಾದಲ್ಲಿ ಯಾವಾಗಲೂ ಟ್ರಾಫಿಕ್ ತೊಂದರೆಯಾಗುತ್ತಿತ್ತು. ಆ ರಸ್ತೆ ಹಾದು ಮುಂದೆ ಹೋಗಲು ಪ್ರಯಾಣಿಕರು ಹರಸಾಹಸ ಪಡುತ್ತಿದ್ದರು.
ಅಲ್ಲೇ ಹೆದ್ದಾರಿಯವರಿಂದ ಸೇತುವೆ ಕಾರ್ಯ ನಡೆಯುತ್ತಿತ್ತು. ಆದರೆ, ಪ್ರಮುಖ ರಸ್ತೆಯಲ್ಲಿ ಹೊಂಡ ಬಿದ್ದ ಕಾರಣ ಪ್ರಯಾಣಿಕರು, ಚಾಲಕರು ಸಂಚರಿಸುವುದೇ ಕಷ್ಟವಾಗುತ್ತಿತ್ತು. ಇಷ್ಟಾದರೂ ಸ್ಥಳೀಯ ಆಡಳಿತ ಹಾಗೂ ಹೆದ್ದಾರಿ ಅಧಿಕಾರಿಗಳು ಕಂಡು ಕಾಣದಂತೆ ಅದೇ ರಸ್ತೆಯಲ್ಲಿ ಹೋಗುತ್ತಿದ್ದರು. ಪದ್ಮಾವತಿ ಸೇತುವೆ ಕಾಮಗಾರಿ ಮಾಡುವವರಿಂದಲೇ ಈ ರಸ್ತೆಯ ಹೊಂಡಗಳನ್ನು ತುಂಬಿಕೊಡಿ ಎಂದು ಕೇಳಿಕೊಂಡಿದ್ದಾರೆ. ಆದರೆ, ಅವರೂ ಇವರ ಮಾತನ್ನು ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಪದ್ಮಾವತಿ ಕಾಯಲಿಲ್ಲ. ತಕ್ಷಣವೇ ಕಾರ್ಯಪ್ರವೃತ್ತರಾದರು.
ಅಲ್ಲೇ ಇದ್ದ ಜಲ್ಲಿಕಲ್ಲು, ಮಣ್ಣಿನಿಂದ ಗುಂಡಿ ಬಿದ್ದ ರಸ್ತೆಗಳನ್ನು ಸ್ವತಃ ತಾವೇ ತುಂಬಿಸಿಬಿಟ್ಟರು. ನೋಡ ನೋಡುತ್ತಿದ್ದಂತೆ ಹೊಂಡಗಳು ಮಾಯವಾಗಿ ರಸ್ತೆ ಸಂಚಾರಕ್ಕೆ ಅನುವಾಯಿತು. ಪ್ರಯಾಣಿಕರು ಅಧಿಕಾರಿಗಳನ್ನು ಶಪಿಸಿದರೆ, ಪದ್ಮಾವತಿಯವರನ್ನು ಬಾಯಿ ತುಂಬಾ ಹರಸಿದರು. ಉನ್ನತ ಪೊಲೀಸ್ ಅಧಿಕಾರಿಗಳು ಕೂಡಾ ಪದ್ಮಾವತಿಯ ಗುಣಗಾನ ಮಾಡಿ, ಹೂಗುಚ್ಛ ನೀಡಿ ಅಭಿನಂದಿಸಿದ್ದಾರೆ. ಈಕೆಗೊಂದು ನಮ್ಮ ಕಡೆಯಿಂದ ಹಾಟ್ಸಾಫ್..
`ದಿ ಹಿಂದೂ’ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಇಲ್ಲಿದೆ..
She closed that pothole at Baikampady Junction
For the six days she had been posted at the Baikampady Junction, the 21-year-old Home Guard constable Padmavathi Kulal had been seeing problems faced by motorists negotiating a big pothole on Mangaluru-Udupi National Highway. Requests to repair it by her and her superior had gone unheard.
On Saturday, which was the last day of her duty at that point, Padmavathi Kulal decided to take the task of closing the pothole on herself. She stopped a truck carrying the load of “jelli” (small stones) mixed with asphalt. She made the truck driver unload a portion of the mixture at the pothole. Ms. Kulal then took a sickle and closed the pothole.
This act of Ms. Kulal was filmed by a person and shared on social networking sites. It went viral and on Tuesday she was called by an organisation working to generate awareness about sound pollution. The organisation felicitated her at the office of the Assistant Commissioner of Police (Traffic) Uday Nayak on Tuesday.
A genial Ms. Kulal said she only wanted to smoothen the traffic movement on the busy highway. “I had seen the problem being caused to motorists. I decided to take action on the last day when I was on duty early at 8 a.m.” said Ms. Kulal, who joined Home Guards an year ago after failing to get into police service. She intends to get into the Armed Forces.
Appreciating Ms. Kulal, Home Guards Commandant Muralee Mohan said her act has inspired home guards to take proactive steps while on duty.
Home Guard constable Padmavathi Kulal took the task on herself while on duty