ಮಂಗಳೂರು (ಕುಲಾಲ್ ವರ್ಲ್ಡ್ ಡಾಟ್ ಕಾಂ): ನಾಗಲ್ಯಾಂಡ್ ಭದ್ರತಾ ವ್ಯವಸ್ಥೆಯ (ಎಡಿಸಿ) ಮುಖ್ಯಸ್ಥರಾಗಿ ಮಂಗಳೂರು ಸನಿಹದ ಪೇಜಾವರದ ಸ್ಕ್ವಾಡ್ರನ್ ಲೀಡರ್ ಅಭಿನೀತ್ ಎ.ಕೆ. ಅವರು ಭಾರತೀಯ ವಾಯುಪಡೆಯಿಂದ ನಿಯೋಜನೆಗೊಂಡಿದ್ದಾರೆ. ಶೀಘ್ರ ಅವರು ತಮ್ಮ ಕರ್ತವ್ಯದ ಎರಡನೇ ವರ್ಷದ ಸೇವೆಯನ್ನು ಪೂರ್ಣಗೊಳಿಸಲಿದ್ದಾರೆ.
2013ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದ್ದ ಅಭಿನೀತ್, ಏರ್ಫೋರ್ಸ್ನಲ್ಲಿ ಅಡ್ವಾನ್ಸ್ ಲೈಟ್ಹೆಲಿಕಾಪ್ಟರ್ (ಎಎಲ್ಎಚ್)ನಲ್ಲಿ ಟೆಕ್ನಿಕಲ್ ಆಫೀಸರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ನಿರ್ದಿಷ್ಟ ಅವಧಿಗೆ ಎಡಿಸಿ ಜವಾಬ್ದಾರಿಯನ್ನು ಪಡೆದುಕೊಂಡಿದ್ದಾರೆ. ರಾಜ್ಯಪಾಲರಿಂದ ಸಂದರ್ಶನ ಎದುರಿಸಿ ಈ ಹುದ್ದೆಗೆ ನಿಯೋಜನೆಗೊಂಡಿದ್ದಾರೆ.
ರಾಜಭವನ ಮತ್ತು ರಾಜ್ಯಪಾಲರ ಭದ್ರತೆಯ ಪೂರ್ಣ ಜವಾಬ್ದಾರಿಯ ಉಸ್ತುವಾರಿ ಎಡಿಸಿ (ಎಯ್ಡ ಡಿ ಕ್ಯಾಂಪ್) ಮೇಲಿರುತ್ತದೆ. ವಾಯಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳ ಪೈಕಿ ಅರ್ಹತೆ ಪರಿಗಣಿಸಿ ಎಡಿಸಿ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆಗೂ ಮುನ್ನ ರಾಜ್ಯಪಾಲರಿಂದ ಸಂದರ್ಶನ ಎದುರಿಸಬೇಕಾಗುತ್ತದೆ. ಈ ಸಂದರ್ಶನದಲ್ಲಿ ಉತ್ತೀರ್ಣರಾದರೆ ಎಡಿಸಿ ಹುದ್ದೆಗೆ ನೇಮಕಗೊಳ್ಳುತ್ತಾರೆ.
ಅಭಿನೀತ್ ಪೇಜಾವರ ಕೆಂಜಾರು ಕೈವಳಿ ಮನೆಯ ಸುಧಾ ಮತ್ತು ಆನಂದ ದಂಪತಿಯ ಪುತ್ರ. ಮಂಗಳೂರಿನ ಸಂತ ಅಲೋಶಿಯಸ್, ಬೆಂಗಳೂರಿನ ಆರ್.ವಿ. ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.
ಇನ್ನು ತಮಗೆ ಸಿಕ್ಕಿರುವ ಅಪರೂಪದ ಅವಕಾಶದ ಬಗ್ಗೆ ಸಂತಸ ಹಂಚಿಕೊಂಡಿರುವ ಅಭಿನೀತ್, ಫೆಬ್ರವರಿಗೆ ಎಡಿಸಿಯಾಗಿ ಎರಡು ವರ್ಷ ಪೂರ್ಣಗೊಳಿಸಲಿದ್ದೇನೆ. ಈ ಅವಕಾಶ ಸಿಕ್ಕಿರುವುದು ಸಂತಸವಾಗಿದೆ. ವಾಯುಪಡೆ ಸೇರ್ಪಡೆಗೆ ಯುವಕರು ಹೆಚ್ಚಿನ ಆಸಕ್ತಿ ತೋರಿಸಬೇಕು. ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ತೋರಿದರೆ ಹಂತ ಹಂತವಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಲು ಅವಕಾಶವಿದೆ ಎಂದಿದ್ದಾರೆ.
ಮಂಗಳೂರಿನ ಅಭಿನೀತ್ ನಾಗಾಲ್ಯಾಂಡ್ ರಾಜಭವನದ ಭದ್ರತಾ ಮುಖ್ಯಸ್ಥ
Banner
1 Min Read