ಯುವಪೀಳಿಗೆ ಕೈಜೋಡಿಸಿದರೆ ಸಂಘವು ಸುದೃಢ : ದೇವದಾಸ್ .ಎಲ್. ಕುಲಾಲ್
ಮುಂಬಯಿ : ಕುಲಾಲ ಸಂಘದ ಕುಲಾಲ ಯುವಪೀಳಿಗೆ ಸಂಘದ ಕಾರ್ಯಕ್ರಮಗಳಲ್ಲಿ ಕೈಜೋಡಿಸಿದರೆ ಸಂಘವು ಸುದೃಢವಾಗುತ್ತದೆ. ನಾವೆಲ್ಲರೂ ಒಂದಾಗಿ, ಒಮ್ಮತದಿಂದ ಸಮಾಜಪರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಂಘಟನೆಯನ್ನು ಬಲಪಡಿಸಲು ಮುಂದಾಗೋಣ ಎಂದು ಕುಲಾಲ ಸಂಘ ಮುಂಬಯಿ ಉಪಾಧ್ಯಕ್ಷ ಪಿ. ದೇವದಾಸ್ ಎಲ್. ಕುಲಾಲ್ ಅವರು ನುಡಿದರು.
ನ. 21ರಂದು ಡೊಂಬಿವಲಿ (ಪ.) ಕೊಹಿನೂರ್ ಸಭಾಗೃಹದಲ್ಲಿ ಜರಗಿದ ಕುಲಾಲ ಸಂಘ ಥಾಣೆ – ಕಸರಾ – ಕರ್ಜತ್ – ಭಿವಂಡಿ ಪ್ರಾದೇಶಿಕ ಸಮಿತಿಯ ವಾರ್ಷಿಕ ಸ್ನೇಹ ಸಮ್ಮಿಲನ ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಸಮಿತಿಯು 12 ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸಿದ್ದು ಅಭಿನಂದನೀಯ. ಸಂಘದ ಸದಸ್ಯತನ, ಅಮೂಲ್ಯ ಪತ್ರಿಕೆಯ ಸದಸ್ಯತನ, ಜ್ಯೋತಿ ಕೋ – ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಸದಸ್ಯತನ ಹೆಚ್ಚಿಸಲು ಎಲ್ಲರೂ ಸಹಕರಿಸಬೇಕು. ಮಂಗಳೂರಿನ ಕುಲಾಲ ಭವನ ಕಾಮಗಾರಿ ಪ್ರಾರಂಭವಾಗಿದ್ದು, ಅದರ ಕೆಲಸಕ್ಕೆ ದೇಣಿಗೆ, ಡೆಪೋಸಿಟ್ ನೀಡಿ ಸಹಕರಿಸಬೇಕು. 2016, ಜ. 31ರಂದು ಡೊಂಬಿವಿಲಿಯಲ್ಲಿ ಜರಗುವ ಕ್ರೀಡೋತ್ಸವಕ್ಕೆ ಸಹಕರಿಸಬೇಕು ಎಂದರು.
ಉಪಸಮಿತಿ ಕಾರ್ಯಾಧ್ಯಕ್ಷ ಕೃಷ್ಣ ಎಸ್. ಮೂಲ್ಯ, ಕೇಂದ್ರ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಡಿ. ಐ. ಮೂಲ್ಯ, ಕೇಂದ್ರ ಸಮಿತಿಯ ಕೋಶಾಧಿಕಾರಿ ಜಯ ಎಸ್. ಅಂಚನ್, ಉಪ ಸಮಿತಿ ಕಾರ್ಯದರ್ಶಿ ಲಕ್ಷ್ಮಣ್ ಸಿ. ಮೂಲ್ಯ, ಕೋಶಾಧಿಕಾರಿ ಸದಾಶಿವ ಜಿ. ಬಂಗೇರ, ಚರ್ಚ್ಗೇಟ್ – ದಹಿಸರ್ ಸಮಿತಿಯ ರಘು ಆರ್. ಮೂಲ್ಯ, ನವಿಮುಂಬಯಿ ಸಮಿತಿಯ ಕಾರ್ಯಾಧ್ಯಕ್ಷ ರಘು ಮೂಲ್ಯ, ಕೇಂದ್ರ ಕಚೇರಿಯ ಮಹಿಳಾ ವಿಭಾಗದ ಕೋಶಾಧಿಕಾರಿ ವನಿತಾ ಕರ್ಕೇರ, ಸ್ಥಳೀಯ ಮಹಿಳಾ ವಿಭಾಗದ ಕಾರ್ಯದರ್ಶಿ ಕುಶಲಾ ಜಿ. ಬಂಗೇರ, ಕೋಶಾಧಿಕಾರಿ ಉಮಾ ಎಸ್. ಸಾಲ್ಯಾನ್ ಅವರು ವೇದಿಕೆಯಲ್ಲಿದ್ದರು.
ಅಮೂಲ್ಯ ಪತ್ರಿಕೆಯ ಸಂಪಾದಕ, ಜ್ಯೋತಿ ಕೋ – ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕೋಶಾಧಿಕಾರಿ ನಾರಾಯಣ ನೇತ್ರಕೆರೆ ಮಾತನಾಡಿ, ಅಮೂಲ್ಯ ತ್ತೈಮಾಸಿಕ ಪತ್ರಿಕೆಯ ಬಗ್ಗೆ ವಿವರಿಸಿದರು. ಅಮೂಲ್ಯ ಪತ್ರಿಕೆಯ ಉಪ ಸಂಪಾದಕ ಶಂಕರ್ ವೈ. ಮೂಲ್ಯ ಮಾತನಾಡಿ, ವಿದ್ಯಾದಾನಕ್ಕಿಂತ ದೊಡ್ಡ ದಾನವಿಲ್ಲ. ಈ ಪರಿಸರದವರು ವಿದ್ಯಾದಾನಕ್ಕೆ ಮಹತ್ತರ ಕೊಡುಗೆ ನೀಡುತ್ತಿದ್ದಾರೆ ಎಂದರು.
ರಘು ಮೂಲ್ಯ ಪಿ. ಮಾತನಾಡಿ, ಸಂಘದ ಎಲ್ಲ ಕಾರ್ಯಕಲಾಪಗಳಲ್ಲಿ ಈ ಸ್ಥಳೀಯ ಸಮಿತಿಯು ಒಳ್ಳೆಯ ಸಹಕಾರವನ್ನು ನೀಡುತ್ತ ಬಂದಿದೆ ಎಂದರು. ಮೀರಾರೋಡ್-ವಿರಾರ್ ಶಾಖೆಯ ಕಾರ್ಯದರ್ಶಿ ಮೋಹನ್ ಬಂಜನ್ ಅವರು, ಡಿ. 6ರಂದು ಕುಲಾಲ ಸಂಘದ ವಿದ್ಯಾನಿಧಿಗೆ ನಾಟಕವೊಂದನ್ನು ಪ್ರದರ್ಶಿಸುತ್ತಿದ್ದೇವೆ. ಅದಕ್ಕೆ ಎಲ್ಲರು ಸಹಕಾರ ನೀಡಬೇಕು ಎಂದರು.
ಸೀನ ಮೂಲ್ಯ, ಸಿಎಸ್ಟಿ-ಮುಲುಂಡ್ ಸಮಿತಿ ಉಪ ಕಾರ್ಯಾಧ್ಯಕ್ಷ ಸುಂದರ್ ತೊಕ್ಕೊಟ್ಟು, ರಘು ಮೂಲ್ಯ ಮಾತನಾಡಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಆಶಾ ಕೆ. ಕುಲಾಲ್ ಅವರು ಸ್ಥಳೀಯ ಸಮಿತಿಯ ಮಹಿಳಾ ಘಟಕದ ಕಾರ್ಯವೈಖರಿಯವನ್ನು ವಿವರಿಸಿದರು. ಮಹಿಳಾ ವಿಭಾಗದವರು ಪ್ರಾರ್ಥಿಸಿದರು. ಕಾರ್ಯಾಧ್ಯಕ್ಷ ಕೃಷ್ಣ ಎಸ್. ಮೂಲ್ಯ ಸ್ವಾಗತಿಸಿ, ಅತಿಥಿಗಳನ್ನು ಪುಷ್ಪಗುತ್ಛವಿತ್ತು ಗೌರವಿಸಿದರು.
ಸಮಾಜ ಬಾಂಧವರ ಮಕ್ಕಳಿಂದ ನೃತ್ಯ ವೈವಿಧ್ಯ ಪ್ರದರ್ಶನಗೊಂಡಿತು. ವಿದ್ಯಾರ್ಥಿಗಳ ದತ್ತು ಸ್ವೀಕರಿಸಿದ ದಾನಿಗಳನ್ನು ಗೌರವಿಸಲಾಯಿತು. ಜತೆ ಕಾರ್ಯದರ್ಶಿ ಆನಂದ್ ಬಿ. ಮೂಲ್ಯ ಅವರು 11ನೇ ವಾರ್ಷಿಕ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿ ಸದಾಶಿವ ಜಿ. ಬಂಗೇರ ಅವರು ವಾರ್ಷಿಕ ಆಯವ್ಯಯ ಪಟ್ಟಿಯನ್ನು ಓದಿದರು. ಅತಿಥಿಗಳಾಗಿ ಪಾಲ್ಗೊಂಡ ಶಂಕರ ಬಂಗೇರ, ಶಿಕ್ಷಕ ಸನತ್ ಕುಮಾರ್ ಜೈನ್, ಮಿತ್ರಪಟ್ಣ ನಾರಾಯಣ ಬಂಗೇರ, ಜಗಜ್ಯೋತಿ ಕಲಾವೃಂದದ ಅಧ್ಯಕ್ಷ ವಸಂತ್ ಎನ್. ಸುವರ್ಣ ಅವರನ್ನು ಅಭಿನಂದಿಸಲಾಯಿತು.
ಕಳೆದ ಸಾಲಿನ ಎಸ್ಎಸ್ಸಿ, ಎಚ್ಎಸ್ಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ಸಮಿತಿಯ ಹಿರಿಯ ಕಾರ್ಯಕರ್ತರಾದ ರಮೇಶ್ ಎ. ಬಂಜನ್ ಥಾಣೆ ಹಾಗೂ ರಮೇಶ್ ಎಸ್. ಮೂಲ್ಯ ಭಿವಂಡಿ ದಂಪತಿಗಳನ್ನು ಸಂಸ್ಥೆಯ ವತಿಯಿಂದ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು. ಆನಂದ ಬಿ. ಮೂಲ್ಯ ವಂದಿಸಿದರು. ಕಾರ್ಯದರ್ಶಿ ಲಕ್ಷ್ಮಣ್ ಸಿ. ಮೂಲ್ಯ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.