ಉಡುಪಿ : ಇಲ್ಲಿ ನಗು ಮಾಸಿದೆ; ನೋವು ಮಡುಗಟ್ಟಿದೆ. ಮನೆಯಲ್ಲಿದ್ದ ಖುಷಿ ದೂರವಾಗಿ ವ್ಯಥೆಯೇ ತುಂಬಿಕೊಂಡಿದೆ. ಮನೆ ತುಂಬ ನಲಿವಿನಿಂದ ಓಡಾಡಿಕೊಂಡು ಇರಬೇಕಾಗಿದ್ದ ಮುದ್ದು ಕಂದಮ್ಮ ಬ್ಲಡ್ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಮಲಗಿದ್ದಾನೆ. ಚಾಲಕ ವೃತ್ತಿಯಿಂದ ಹೊಟ್ಟೆ ಬಟ್ಟೆಗಾಗುವಷ್ಟು ಸಂಪಾದಿಸುತ್ತಿದ್ದ ತಂದೆ ಶಂಕರ್ ಕುಲಾಲ್ ಇದೀಗ ಮಗುವಿನ ಚಿಕಿತ್ಸೆಯ ಲಕ್ಷಾಂತರ ರೂ. ವೆಚ್ಚ ಬರಿಸಲಾಗದೆ ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ.. ದಾನಿಗಳ, ಸಮುದಾಯ ಬಾಂಧವರ, ಊರವರ ಆರ್ಥಿಕ ಸಹಕಾರ ನಿರೀಕ್ಷೆಯಲಿದ್ದಾರೆ..
ಸುರತ್ಕಲ್ ಕಾಟಿಪಳ್ಳದಲ್ಲಿ ವಾಸ್ತವ್ಯ ಇರುವ ಕಾಪು ಪಾದೂರಿನ ಶಂಕರ ಕುಲಾಲ್ ಮತ್ತು ಬೋಳ ಮಿತ್ತಬೈಲಿನ ಜಯಂತಿ ಮೂಲ್ಯ ದಂಪತಿಗಳ 6 ವರ್ಷದ ಪುಟ್ಟ ಕಂದಮ್ಮ ಯಶ್ವಿನ್ ಕುಲಾಲ್ ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವ ದುರ್ದೈವಿ. ಮನೆ ತುಂಬಾ ಓಡಾಡಿಕೊಂಡು ಆರಾಮಾಗುದ್ದ ಮಗುವಿಗೆ ಪದೇ ಪದೇ ಆರೋಗ್ಯ ಸಮಸ್ಯೆ ಕಾಡಿದಾಗ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿದ ದಂಪತಿಗಳಿಗೆ ಆಘಾತ ಕಾದಿತ್ತು. ಮಗುವನ್ನು ಪರೀಕ್ಷಿಸಿದ ವೈದ್ಯರು ಮಗುವಿಗೆ ಕ್ಯಾನ್ಸರ್ ಇರುವುದನ್ನು ದೃಢೀಕರಿಸಿದರು. ತುರ್ತಾಗಿ ಮಗುವಿಗೆ ಚಿಕಿತ್ಸೆ ನೀಡಬೇಕಾಗಿದ್ದು ಇದಕ್ಕೆ 6 ಲಕ್ಷಕ್ಕೂ ಅಧಿಕ ಮೊತ್ತ ತಗಲುವುದಾಗಿ ವೈದ್ಯರು ಹೇಳಿದ್ದಾರೆ.
ಗೃಹಿಣಿಯಾಗಿರುವ ತಾಯಿ, ಚಾಲಕ ವೃತ್ತಿಯಿಂದ ಹೊಟ್ಟೆ ಬಟ್ಟೆಗಾಗುವಷ್ಟು ಸಂಪಾದಿಸಲಷ್ಟೆ ಶಕ್ತವಾಗಿರುವ ತಂದೆ ಮಗುವಿನ ಚಿಕಿತ್ಸೆಯ ವೆಚ್ಚ ಬರಿಸಲು ಸಾಧ್ಯವಾಗದೇ ಹೃದಯವಂತ ದಾನಿಗಳ ಆರ್ಥಿಕ ಸಹಕಾರದ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಕೈಯಿಂದ ಲಕ್ಷಾಂತರ ರೂಪಾಯಿ ವ್ಯಯಿಸಿರುವ ಶಂಕರ್ ಕುಲಾಲ್ ಮಗುವಿನ ಮುಂದಿನ ಚಿಕಿತ್ಸಾ ವೆಚ್ಚಕ್ಕೆ ಹಣದ ಸಹಾಯ ಮಾಡಿ ಎಂದ ಸಮಾಜದ ಮುಂದೆ ದೈನ್ಯರಾಗಿ ಬೇಡಿಕೊಂಡಿದ್ದಾರೆ.
ಈಗಷ್ಟೇ ಅರಳುತ್ತಿರುವ ಮೊಗ್ಗು ಯಶ್ವಿನ್ ಕುಲಾಲ್ ಕ್ಯಾನ್ಸರ್ ಯಿಂದ ಮುಕ್ತಿ ಪಡೆದು ಈ ಸಮಾಜದಲ್ಲಿ ಎಲ್ಲರಂತೆ ಬೆಳೆಯಬೇಕಾದರೆ ನಿಮ್ಮೆಲ್ಲರ ಆರ್ಥಿಕ ಸಹಕಾರ ಈ ಬಡ ಕುಟುಂಬಕ್ಕೆ ತುರ್ತಾಗಿ ಬೇಕಿದೆ. ಮುದ್ದು ಮೊಗದ ಈ ಪುಟ್ಟ ಪೋರನ ಚಿಕಿತ್ಸೆಗೆ ಸ್ಪಂದಿಸುವಿರಾ?
ಆರ್ಥಿಕವಾಗಿ ಸಹಕಾರ ಮಾಡುವವರು ಶಂಕರ್ ಕುಲಾಲ್ ಅವರ ಬ್ಯಾಂಕ್ ಕೆಳಗಿನ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬಹುದು.
Shankar .C.
SB A/c No.120301010007589
IFSC code- VIJB0001203
Vijaya Bank. Main Road, Surathkal, Mangaluru
ಅಥವಾ ” ಕುಲಾಲ ಯುವ ವೇದಿಕೆ” ಕಾಪು ಘಟಕದ ಉದಯ ಕುಲಾಲ್: 9844344253 ಅವರನ್ನು ಸಂಪರ್ಕಿಸಿಯೂ ಆರ್ಥಿಕವಾಗಿ ಸಹಕಾರ ಮಾಡಬಹುದು.
ವರದಿ : ಉದಯ ಕುಲಾಲ್ ಕಳತ್ತೂರು