ಪುತ್ತೂರು : ಪುತ್ತೂರು ತಾಲೂಕು ಕುಲಾಲ ಸಮಾಜ ಸೇವಾ ಸಂಘದ 2016-17ನೇ ಸಾಲಿನ ನೂತನ ಅಧ್ಯಕ್ಷರಾಗಿ ಪಿ.ವಿ.ದಿನೇಶ್, ಉಪಾಧ್ಯಕ್ಷರಾಗಿ ಸಚ್ಚಿದಾನಂದ ಡಿ, ಕಾರ್ಯದರ್ಶಿಯಾಗಿ ನ್ಯಾಯವಾದಿ ಮಹೇಶ್ ಕೆ.ಸವಣೂರು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಸಂಘದ ನಿಕಟಪೂರ್ವ ಅಧ್ಯಕ್ಷ ಭಾಸ್ಕರ್ ಪೆರುವಾಯಿಯವರ ಅಧ್ಯಕ್ಷತೆಯಲ್ಲಿ ಸಂಘದ ಕಚೇರಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಜೊತೆಕಾರ್ಯದರ್ಶಿಯಾಗಿ ಮಾಧವ ಕುಲಾಲ್ ಸೇಡಿಯಾಪು, ಖಜಾಂಜಿಯಾಗಿ ಪಿ.ಧರ್ಣಪ್ಪ ಮೂಲ್ಯ ನೆಹರುನಗರ, ಕ್ರೀಡಾ ಕಾರ್ಯದರ್ಶಿಯಾಗಿ ನವೀನ್ ಕುಮಾರ್ ಕುಲಾಲ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸತೀಶ್ ಕುಲಾಲ್ ಉಡ್ಡಂಗಳ, ಸಂಘಟನಾ ಕಾರ್ಯದರ್ಶಿಯಾಗಿ ಚೇತನ್ ಬಲ್ನಾಡುರವರು ಆಯ್ಕೆಯಾದರು.
ಕೃಷ್ಣ ಮೂಲ್ಯ ಪೈರುಪುಣಿ, ಶ್ರೀಧರ್ ಕುಲಾಲ್ ಸೇಡಿಯಾಪು, ಆನಂದ ಕುಲಾಲ್ ಪಡೀಲ್, ಶೀನಪ್ಪ ಮೂಲ್ಯ ವೀರಮಂಗಲ, ವಸಂತ ಕುಲಾಲ್ ನೆಹರುನಗರ, ರವಿಕುಲಾಲ್ ಕೆಯ್ಯೂರು, ಜನಾರ್ದನ ಸೀಟಿಗುಡ್ಡೆ, ಕೃಷ್ಣಪ್ಪ ಪಾರೆಸ್ಟರ್, ಜನಾರ್ದನ ಸಾರ್ಯ, ಚಂದ್ರಶೇಖರ ಕೆ, ಕೃಷ್ಣಪ್ಪ ಮಚ್ಚಿಮಲೆ, ತುಕಾರಾಮ ಕುಲಾಲ್, ನಿಕಟಪೂರ್ವ ಅಧ್ಯಕ್ಷ ಭಾಸ್ಕರ್ ಪೆರುವಾಯಿ, ಚಂದ್ರಹಾಸ ಕುಲಾಲ್ರವರು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದರು.