
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2021-22ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕೊಲ್ಯ ಸೋಮೇಶ್ವರ ಸೇಂಟ್ ಜೋಸೆಫ್ ಜಾಯ್ ಲ್ಯಾಂಡ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಚೇತನಾ ಎಂ ಕುಲಾಲ್ 87% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಉಳ್ಳಾಲಬೈಲ್ ಕಲ್ಲಕಂಡ ಶುಭಮಂಗಳ ಮನೆಯ ಮಹಾಬಲ ಮತ್ತು ಗೀತಾ ದಂಪತಿಯ ಸುಪುತ್ರಿ.

