
ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಯುವಜನಾಂಗವನ್ನು ಸೆಳೆಯುವ ನಿಟ್ಟಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organisation -ISRO) ಎರಡು ವಾರಗಳ `
ಯುವಿಕಾ' ವಿಶೇಷ ಕಾರ್ಯಕ್ರಮಕ್ಕಾಗಿ ದೇಶಾದ್ಯಂತ 9ನೇ ತರಗತಿಯಿಂದ 150 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ್ದು, ಇದರಲ್ಲಿ ಮಂಗಳೂರು ಎಂಆರ್ ಪಿಎಲ್ ಡೆಲ್ಲಿ ಪಬ್ಲಿಕ್ ಸ್ಕೂಲ್ ನ 9ನೇ ತರಗತಿ ವಿದ್ಯಾರ್ಥಿ ಪ್ರಥಮ್ ಆಯ್ಕೆಯಾಗಿದ್ದಾನೆ. ಬೆಂಗಳೂರು, ತಿರುವನಂತಪುರಂ, ಹೈದರಾಬಾದ್, ಅಹಮದಾಬಾದ್ ಮತ್ತು ಶಿಲ್ಲಾಂಗ್ ನಲ್ಲಿ ಇಸ್ರೋ ಯುವಿಕಾ (Young Scientist Programme - ಯುವ ವಿಜ್ಞಾನಿ ಕಾರ್ಯಕ್ರಮ) ಆಯೋಜಿಸಲಿದೆ. ಅಲ್ಲದೇ ಅವರನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರಕ್ಕೆ ಪ್ರವಾಸಕ್ಕೆ ಕರೆದೊಯ್ಯಲಾಗುತ್ತದೆ. ಕರ್ನಾಟಕದಿಂದ ಆಯ್ಕೆಯಾಗಿರುವ ಐವರು ವಿದ್ಯಾಥಿಗಳಲ್ಲಿ ಪ್ರಥಮ್ ಒಬ್ಬನಾಗಿದ್ದು, ಸುರತ್ಕಲ್ ಕಾಟಿಪಳ್ಳದ ದಿನಕರ್ ಮತ್ತು ನಮಿತಾ ದಂಪತಿಯ ಸುಪುತ್ರನಾಗಿದ್ದಾನೆ. ಪ್ರಥಮ್ ಈ ಹಿಂದೆ ಎರಡು ಬಾರಿ ವಿದ್ಯಾರ್ಥಿ ವಿಜ್ಞಾನ ಮಂಥನ (VVM)ದಲ್ಲಿ ರಾಜ್ಯದ ಟಾಪರ್ ಆಗಿದ್ದನು.ಯುವಿಕಾ’ ವಿಶೇಷ ಕಾರ್ಯಕ್ರಮವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಪ್ರಸ್ತುತ ಮತ್ತು ಹೊರಹೊಮ್ಮುತ್ತಿರುವ ಪ್ರವೃತ್ತಿಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ವಿದ್ಯಾರ್ಥಿಗಳು ಮತ್ತು ವಿಜ್ಞಾನಿಗಳ ನಡುವೆ ವಿವಿಧ ಚರ್ಚೆಗಳು ಮತ್ತು ಸಂವಾದವನ್ನು ಈ ಕಾರ್ಯಕ್ರಮ ಹೊಂದಿರುತ್ತದೆ. . 8ನೇ ತರಗತಿಯಲ್ಲಿ ಪಡೆದಿರುವ ಅಂಕಗಳು, ವಿಜ್ಞಾನ ಮೇಳ, ಒಲಿಂಪಿಯಡ್ ನಲ್ಲಿ ಬಹುಮಾನ, ವಿಜ್ಞಾನ ಸ್ಪರ್ಧೆ , ಎನ್ ಸಿಸಿ, ಅಥವಾ ಎನ್ ಎಸ್ ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಮೇ 16 ರಿಂದ ಮೇ 28ರವರೆಗೂ ಕಾರ್ಯಕ್ರಮ ನಡೆಯಲಿದೆ
