ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಸಾಮಾಜಿಕ ಜಾಲತಾಣ ವಾಟ್ಸಪ್ ಮೂಲಕವೇ ನೊಂದವರ ಧ್ವನಿಯಾಗಿ ಬಡವರ ಆಶಾಕಿರಣವಾಗಿರುವ ಕುಲಾಲ್ ವರ್ಲ್ಡ್' ವಾಟ್ಸಪ್ ಮಿತ್ರರ ತಂಡದಿಂದ ಮೂರು ಅಶಕ್ತ ಕುಟುಂಬಕ್ಕೆ 1,28,277 ರೂಪಾಯಿ ಧನಸಹಾಯ ಹಸ್ತಾಂತರಿಸಿ ಸಾಂತ್ವನ ಹೇಳಲಾಯಿತು.
ಕುಲಾಲ್ ವರ್ಲ್ಡ್’ ಗ್ರೂಪ್ ವತಿಯಿಂದ ಸಂಗ್ರಹಗೊಂಡ ಒಟ್ಟು ಹಣವನ್ನು ಮೂರು ಕುಟುಂಬಕ್ಕೆ ಸಮನಾಗಿ ಹಂಚಲಾಯಿತು. ಅದರಂತೆ 42,759 ರೂಪಾಯಿಯನ್ನು ಹೃದಯ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿರುವ ಬಂಟ್ವಾಳ ತಾಲೂಕಿನ ಪಲ್ಲಿಪಾಡಿಯ ನಿವಾಸಿಗಳದ ದಿವ್ಯಾ ಮತ್ತು ಚೇತನ್ ಕುಲಾಲ್ ಅವರ ಎಳೆ ಮಗು ಭಾರ್ಗವಿಗೆ ಹಾಗೂ 42,759 ರೂಪಾಯಿಯನ್ನು ಗರ್ಭಕೋಶದ ಕ್ಯಾನ್ಸರ್ ನಿಂದ ಬಳಲುತ್ತಿರುವ ಶಿರ್ಲಾಲು ಗ್ರಾಮದ ಗುರುಮಜಲುವಿಲ್ಲಿ ವಾಸವಾಗಿರುವ ಕುಸುಮ ಮೂಲ್ಯ ಅವರಿಗೆ ಮತ್ತು ಕರುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಕಾಸರಗೋಡು ಕುಂಬಳೆ ಕಿದೂರಿನ ಕು| ಹರ್ಷಿತ ಕುಲಾಲ್ ಅವರಿಗೆ 42,759 ರೂಪಾಯನ್ನು ಚೆಕ್ ಮೂಲಕ ನೀಡಲಾಯಿತು.
ಕುಲಾಲ್ ವರ್ಲ್ಡ್' ವಾಟ್ಸಪ್ ಗ್ರೂಪಿನ ನಿರ್ವಾಹಕರಾದ ರಂಜಿತ್ ಕುಲಾಲ್ ಹಾಗೂ ಹೇಮಂತ್ ಕುಮಾರ್ ಅವರ ಮುತುವರ್ಜಿಯಲ್ಲಿ ಮೇಲಿನ ಮೂವರು ರೋಗಿಗಳ ಚಿಕಿತ್ಸೆಗೆ ಹಣ ಸಂಗ್ರಹ ನಡೆಸಲಾಗಿತ್ತು. ಇದಕ್ಕೆ ನೂರಾರು ಊರ-ಪರವೂರ ಹೃದಯವಂತ ದಾನಿಗಳು ಸ್ಪಂದಿಸಿದ್ದರು. ಸಂಗ್ರಹವಾದ ಹಣವನ್ನು ಇಂದು (ಫೆ.(ಫೆ.27) ಅಪರಾಹ್ನ ಮಂಗಳೂರಿನ ಲೇಡಿಹಿಲ್ ಬಳಿ ಇರುವ
ಕುಲಾಲ್ ವರ್ಲ್ಡ್’ ಮಹಿಳಾ ತಂಡದ ಪ್ರಮುಖರಾದ ದಯಾಲಕ್ಷ್ಮೀ ಬಂಗೇರ ಇವರ ಸಂಸ್ಥೆ AQUA DECOR ಕಚೇರಿಯಲ್ಲಿ ಹಸ್ತಾಂತರಿಸಲಾಯಿತು.
ಈ ಸಂದರ್ಭ ಹಣ ಸಂಗ್ರಹದ ಜವಾಬ್ದಾರಿ ಹೊತ್ತುಕೊಂಡು ಶ್ರಮಿಸಿದ ಗ್ರೂಪ್ ಅಡ್ಮಿನ್ ಗಳಾದ ಹೇಮಂತ್ ಕುಮಾರ್ ಕಿನ್ನಿಗೋಳಿ, ರಂಜಿತ್ ಕುಮಾರ್ ಮೂಡಬಿದ್ರೆ, ದಯಾಲಕ್ಷ್ಮೀ ಬಂಗೇರ ಹಾಗೂ ಸದಸ್ಯರಾದ ಜಗದೀಶ್ ಕುಲಾಲ್ ಬೀಡು, ರಮೇಶ್ ಕುಮಾರ್ ವಗ್ಗ ಅವರು ಉಪಸ್ಥಿತರಿದ್ದರು.