ತಲ್ಣಣವಿರುವುದು
ಕನ್ನಡ -ಇಂಗ್ಲೀಷ್ ಭಾಷೆಯಲ್ಲಿ ಅಲ್ಲ
ವಿವಿ ಯ ಭಾಷಾ ಪಂಡಿತರ ಮನದಲ್ಲಿ ಅಲ್ಲ
ಭಾರತ-ಕರ್ನಾಟಕ -ಕರಾವಳಿಯಲ್ಲಿ ಅಲ್ಲ
ಕನ್ನಡ ತುಳು ಕೂಂಕಣಿ ಬ್ಯಾರಿ ಸಮ್ಮೇಳನದಲ್ಲಿ ಅಲ್ಲ
ಭಾಷಣ ಭೂಷಣ ಹಾರ ತುರಾಯಿನೀಡುವವರು ಹಾಗೂ ಪಡೆಯುವವರಲ್ಲಿ ಅಲ್ಲ.
ತಲ್ಲಣ ಇರುವುದು ಹಸಿದ ಹೂಟ್ಟೆಯಲ್ಲಿ
ತಲ್ಲಣ ಇರೂವುದು ಬದುಕು ಬರಡಾದವರಲ್ಲಿ
ತಲ್ಲಣ ಇರುವುಥು ಕವಡೆ ಕಾಸಿನ ಕಿಮ್ಮತಿಲ್ಲದ ಬಡವನ ಗುಡಿಸಲಿನಲ್ಲಿ
ತಲ್ಲಣ ಇರುವುದು ಒಪ್ಪತ್ತಿನ ಊಟಕ್ಕಿಲ್ಲದ
ಬ್ರಾಹ್ಮಣ, ದಲಿತ, ದೀನದುರ್ಬಲರ ಮನದೊಳಗೆ.
ನನಗೆ ಇಂಗ್ಲೀಷ್ ಬ್ರಾಹ್ಮಣನೂ ಅಲ್ಲ
ಕನ್ನಡ ಶೂದ್ರನೂ ಅಲ್ಲ
ದುಡ್ಡು ಅದಿಕಾರ ಇದ್ದವ ಬ್ರಾಹ್ಮಣ
ಅದಿಲ್ಲದೇ ಬಸವಳಿದವ ಶೂದ್ರ
ಇದ ತೂಲಗಿಸಲು
ಕಾವ್ಯ ಖಡ್ಗವಾಗಬೇಕು
ಖಡ್ಗ ಕಾವ್ಯವಾಗಬೇಕು.
ಇಂಗ್ಲೀಷ್,ಪ್ರೆಂಚ್ ಪಾರ್ಸಿಯನ್ನ
ಅಭ್ಯಸಿಸುವ ಮೊದಲು ನಮ್ಮೂರ
ನಮ್ಮ ಮನ ಮನೆಯ ತಲ್ಲಣವನ್ನ ಓದಲು ಕಲಿಯಬೇಕು, ಅದಕ್ಕೆ ನಿಮ್ಮನ್ನ ಒಗ್ಗಿಸಿಕೂಳ್ಳಬೇಕು
ಪದವಿ,ಪಿಎಚ್ ಡಿಗಳು ತಲ್ಲಣಕ್ಕೆ ಮದ್ದಲ್ಲ
ವಿವಿಯ ಪ್ರೊಫೆಸರರು ತಲ್ಲಣ ತಣಿಸುವ ಹರಿಕಾರರಲ್ಲ
ತಲ್ಲಣ ದ ಮೂಲ ನೋವು ಹಸಿವು
ಅಜ್ಞಾನ ಅನಕ್ಷರತೆ ದೌರ್ಜನ್ಯ
ಪರಿಹಾರವನ್ನ ಅಲ್ಲಿದ್ದೆ ಹುಡುಕಬೇಕು
ಸರಕಾರದ ದುಡ್ಡಲ್ಲಿ ವಿದೇಶ ತಿರುಗಿದರೆ
ತಲ್ಲಣ ತಣಿಯೋಲ್ಲ
ನಾವು -ನೀವು, ನೋವು ಹಸಿವಿನೆಡೆಗೆ ತಿರುಗಬೇಕು
ಅಮೈರಿಕಾದ ಐಸಾರಾಮಿ ಹಳ್ಳಿಯ
ಸುತ್ತುವ ಬದಲು ನಮ್ಮ ನಿಮ್ಮೂರ
ಹಳ್ಳಿಯ ಕಡೆಗೆ ಮುಖ ಮಾಡಬೇಕು
ನಮ್ಮ ಕನ್ನಡದಲ್ಲಿಯ ಸಾಹಿತ್ಯ ಶಕ್ತಿ
ಆಳ ಹರಿವು ಶೋಧ ಸಂವಾದ
ಇಂಗ್ಲೀಷ್ ನಲ್ಲಿ ಎಲ್ಲಿದೇ.
ಬರೆದಂತೆ ಓದುವ ಓದಿದಂತೆ ಬರೆದು ಮಾತಾಡ
ಬಲ್ಲ ಕನ್ನಡದ ನೈಜ ಮನ ದಲ್ಲಿ ತಲ್ಲಣವಿಲ್ಲ.
ತಲ್ಲಣ ವಿರುವುದು ಹಾರ ತುರಾಯಿಗೆ ಮಾತ್ರ
ತುಡಿಯುವ ಮನಸ್ಸುಗಳಲ್ಲಿ…
ಇಂಗ್ಲೀಷ್ ನಲ್ಲಿ ಓದಿ
medicine surgery botany zoology chemistry ಗಳಲ್ಲಿ ಪದವಿ ಪಡೆದಿರುವ ಎನಗೆ
ಹೂಟ್ಟೆಗೆ ಬಟ್ಟೆಗೆ ಕೊಡುತ್ತಿರುವುದು ಅದನ್ನ ಕನ್ನಡ ತುಳು ಬ್ಯಾರಿ ಕೂಂಕಣಿ ಭಾಷೆಗೆ ಭಟ್ಟಿ ಇಳಿಸಿ
ಇಲ್ಲಿಯ ಜನಸಾಮಾನ್ಯರ ಜೂತೆ ಬೆರೆತಾಗ ಮಾತ್ರ
ಹಾಗಾಗಿ
ತಲ್ಲಣವನ್ನ ಹುಡುಕುತ್ತಾ
ಸಾಗಬೇಕು
ಕಪ್ಪಚಿಪ್ಪುಗಳನ್ನ ಹೆಕ್ಕಿ ತೆಗೆದು
ಮುತ್ತುಗಳನ್ನಾಗಿ ಮಾರ್ಪಡಿಸುವ
ಕಲೆ ಹಾಗು ಹ್ರದಯ ಶ್ರೀಮಂತಿಕೆಯತ್ತ…
ರಚನೆ : ಡಾ. ಅಣ್ಣಯ್ಯ ಕುಲಾಲ್ ಉಳ್ತೂರು