ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) :ಇಂದಿನ ತಾಂತ್ರಿಕ ಜೀವನದಲ್ಲಿ ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೆ ಒಳಗಾಗದೆ ಪ್ರಾಥಮಿಕ ಹಂತದಲ್ಲೇ ಮುಂದಿನ ವಿದ್ಯಾಭ್ಯಾಸದ ಬಗೆ ಸೂಕ್ತ ನಿರ್ಧಾರ ತೆಗೆದು ಕೊಂಡಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದು ಭಾರತೀಯ ವಾಯು ಸೇನೆಯ ಸ್ಕ್ವೇಡೆನ್ ಲೀಡರ್ ಅಭಿನಿತ್ ಎ ಕೆ ನುಡಿದರು.
ಅವರು ಕುಳಾಯಿ ಕುಲಾಲ ಸಂಘ, ಕುಲಾಲ ಮಹಿಳಾ ಮಂಡಲ ಹಾಗೂ ಕುಲಾಲ ರಜತ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ ಸಾಧಕರಿಗೆ ಸನ್ಮಾನ , ಪ್ರತಿಭಾ ಪುರಸ್ಕಾರ ಮತ್ತು ದತ್ತು ಪಡೆದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಇನ್ನೊರ್ವ ಮುಖ್ಯ ಅತಿಥಿ,ಸಮಗ್ರ ಶಿಕ್ಷಣ ಇಲಾಖೆ ಮಂಗಳೂರು ಇದರ ಪ್ರಥಮ ದರ್ಜೆ ಸಹಾಯಕರಾದ ತಾರಾ ಊರ್ವಸ್ಟೋರ್ ಮಾತನಾಡಿ ಹೆತ್ತವರು ವಿದ್ಯಾರ್ಥಿಗಳ ಅಭಿರುಚಿಯನ್ನು ಅರಿತು ಪ್ರೋತ್ಸಾಹ ನೀಡಬೇಕು ಎಂದರು.
ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಪ್ರಶಸ್ತಿ ವಿಜೇತ ಸುಕಿರ್ತ್ ಕುಲಾಲ್ ಹಾಗೂ ತುಳು ಭಾಷೆ, ತುಳು ಲಿಪಿ ಕಲಿಸಲು ನೀಡಿದ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಜೈ ತುಳುನಾಡ್ ಸಂಸ್ಥೆಯ ಅಧ್ಯಕ್ಷ ಸುದರ್ಶನ್ ಕುಲಾಲ್ ಅವರನ್ನು ಸಾಧಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಬೇಬಿ ಟೀಚರ್ ಸಾಧಕ ಪ್ರಶಸ್ತಿ ಪತ್ರವನ್ನು ವಾಚಿಸಿದರು. ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ 15 ಮಂದಿ ವಿದ್ಯಾರ್ಥಿಗಳನ್ನು ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ರಜತ ಸೇವಾ ಟ್ರಸ್ಟ್ ನಿಂದ ದತ್ತು ಪಡೆದ 10 ವಿದ್ಯಾರ್ಥಿಗಳಿಗೆ ರೂಪಾಯಿ 50,000 ಕ್ಕಿಂತ ಹೆಚ್ಚು ಮೌಲ್ಯ ದ ಶೈಕ್ಷಣಿಕ ಸವಲತ್ತುಗಳನ್ನು ವಿತರಿಸಲಾಯಿತು
ಕುಳಾಯಿ ಕುಲಾಲ ಸಂಘದ ಅಧ್ಯಕ್ಷ ಗಂಗಾಧರ್ ಕೆ ಅಧ್ಯಕ್ಷತೆ ವಹಿಸಿದರು. ಕುಲಾಲ ಮಹಿಳಾ ಮಂಡಳದ ಅಧ್ಯಕ್ಷೆ ಮೀರಾ ಮೋಹನ್, ಕುಲಾಲ ರಜತ ಸೇವಾ ಟ್ರಸ್ಟ್ ನ ಅಧ್ಯಕ್ಷ ಮೋಹನ್ ಐ ಮೂಲ್ಯ, ಸಭಾ ವೇದಿಕೆಯಲ್ಲಿದರು. ಈ ಸಂದರ್ಭದಲ್ಲಿ ಜಯೇಶ್ ಜಿ, ಜನಾರ್ಧನ್ ಸಾಲಿಯಾನ್, ಕುಮಾರ್ ಕುಲಾಲ್, ನಾಗೇಶ್ ಕುಲಾಲ್, ಯೋಗೀಶ್ ಡಿ ಕುಲಾಲ್, ಗಣೇಶ್ ಏನ್ ಎಂ ಪಿ ಟಿ, ನಾಗೇಶ್ ಟಿ, ಗಣೇಶ್ ಎಸ್ ಕುಲಾಲ್, ಭಾರತಿ ಗಂಗಾಧರ್,ಶೋಭಾ ವಿಶ್ವನಾಥ್, ತಾರಾ ಚಂದ್ರಹಾಸ್, ಲೀಲಾವತಿ ಆರ್ ಕೆ, ಉಪಸ್ಥಿತರಿದ್ದರು. ಕಾರ್ಯದರ್ಶಿ ಗಂಗಾಧರ್ ಬಂಜನ್ ಸ್ವಾಗತಿಸಿದರು. ಹರೀಶ್ ಕುಲಾಲ್ ವಂದಿಸಿದರು. ಶ್ರೀನಾಥ್ ಕಾಟಿಪಳ್ಳ ನಿರೂಪಿಸಿದರು.