ಬಂಟ್ವಾಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ದಕ್ಷಿಣ ಕನ್ನಡ ಉಡುಪಿ, ಕೊಡಗು ಚಿಕ್ಕಮಂಗಳೂರು ಜಿಲ್ಲೆಗಳಲ್ಲಿ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ 10ನೇ ಶಾಖೆಯು ಮೆಲ್ಕಾರ್-ಪಾಣೆ ಮಂಗಳೂರು ಜನಾರ್ದನ ಕಾಂಪ್ಲೆಕ್ಸ್ನಲ್ಲಿ ಅ.೨೨ರಂದು ಉದ್ಘಾಟನೆಗೊಂಡಿತು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಅವರು ನೂತನ ಶಾಖಾ ಕಚೇರಿಯನ್ನು ಉದ್ಘಾಟಿಸಿದರು. ಮೆಸ್ಕಾನ ಮುಖ್ಯ ಅಭಿಯಂತರ ಮಂಜಪ್ಪ ಅವರು ಕಚೇರಿಯಲ್ಲಿ ದೀಪ ಪ್ರಜ್ವಲನಮಾಡಿದರು. ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು.
ಗಣಕ ಯಂತ್ರದ ಉದ್ಘಾಟನೆಯನ್ನು ಬಿರ್ವ ಸೆಂಟರ್ ಮೆಲ್ಕಾರು ಇದರ ಮಾಲಕ ಸಂಜೀವ ಪೂಜಾರಿ ಅವರು ನೆರವೇರಿಸಿದರು. ಪುರಸಭಾ ಸದಸ್ಯೆಯರಾದ ಜೆಸಿಂತಾ ಡಿ ಸೋಜ ಮತ್ತು ಗಾಯತ್ರಿ ಪ್ರಕಾಶ್ ಅವರು ಠೇವಣಿ ಪತ್ರ ಬಿಡುಗಡೆಗೊಳಿಸಿದರು. ಕುಲಾಲ ಕುಂಬಾರರ ಯುವ ವೇದಿಕೆ ಬಂಟ್ವಾಳ ಇದರ ಅಧ್ಯಕ್ಷ ಸತೀಶ್ ಜಕ್ರಿಬೆಟ್ಟು, ಕುಲಾಲ ಸಂಘ ಬಂಟ್ವಾಳ ಇದರ ಅಧ್ಯಕ್ಷೆ ಜಯಂತಿ ಟೀಚರ್, ಮೆಲ್ಕಾರ್ನ ಜನಾರ್ದನ ಕಾಂಪ್ಲೆಕ್ಸ್ನ ಮಾಲಕ ಜಗನ್ನಾಥ ಪೈ ಮತ್ತಿರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಭಾಸ್ಕರ ಎಂ ಪೆರುವಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ದಾಮೋದರ ವಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್ ಜನಾರ್ದನ ಮೂಲ್ಯ, ನಿರ್ದೇಶಕರಾದ ಬಿ.ಎಸ್ ಕುಲಾಲ್, ಯಚ್. ಪದ್ಮಕುಮಾರ್, ಶುಭ ಎ. ಬಂಜನ್, ಶಿವಪ್ಪ ಮೂಲ್ಯ, ನಾರಾಯಣ ಕುಲಾಲ್, ಸೇಸಪ್ಪ ಕುಲಾಲ್, ಪ್ರಶಾಂತ್ ಬಂಜನ್, ನಾಗೇಶ್ ಕುಲಾಲ್, ಸಚ್ಚಿದಾನಂದ ಡಿ, ಜಯಶ್ರೀ ಎಸ್ ವಿವಿಧ ಕಾರ್ಯಕ್ರಮ ನಿರೂಪಿಸಿದರು.
ಚಿತ್ರ ಕೃಪೆ : suddinews.com