ಬೆಳ್ತಂಗಡಿ :ಶಿರ್ಲಾಲು ಗ್ರಾಮದ ಬೈರೊಟ್ಟು ಬಾಬು ಮೂಲ್ಯರವರ ಪುತ್ರ ರಾಮಣ್ಣ ಮೂಲ್ಯಕಿಡ್ನಿ ವೈಫ್ಯಲತೆಯಿಂದ ಬಳಲುತ್ತಿದ್ದು , ಚಿಕಿತ್ಸೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಲ್ಕೇರಿಮೊಗ್ರು ಪ್ರಗತಿ ಬಂಧು ಒಕ್ಕೂಟ ಮತ್ತು ಮಹಿಷಮರ್ದಿನಿ ಜ್ಞಾನವಿಕಾಸ ಕೇಂದ್ರ, ಸ್ವ ಸಹಾಯ ಸಂಘಗಳ ವತಿಯಿಂದ, .12,550 ರೂಪಾಯಿಯನ್ನು ಇತ್ತೀಚೆಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಆನಂದ ಮಡಿವಾಳ, ಶ್ರೀಧರ ಅಂಚನ್ , ಜ್ಞಾನವಿಕಾಸ ಕೇಂದ್ರದ ಸಂಯೋಜಕಿ ಶ್ರೀಮತಿ ವಿನೋದ, ಸೇವಾ ಪ್ರತಿನಿಧಿ ಸುಲೋಚನಾ ಉಪಸ್ಥಿತರಿದ್ದರು.