ಕುಂದಾಪುರ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2019-20ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕುಂದಾಪುರ ಭಂಡಾರಕಾರ್ಸ್ ಆಟ್ಸ್ ಮತ್ತು ಸೈನ್ಸ್ ಕಾಲೇಜಿನ ವಿದ್ಯಾರ್ಥಿ ಸೃಜನ್ ಆರ್ ಕುಲಾಲ್ ಅವರು ವಿಜ್ಞಾನ ವಿಭಾಗದಲ್ಲಿ 93.16% ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಹೆಮ್ಮಾಡಿಯ ಸರೋಜ ಕುಲಾಲ್ ಅವರ ಸುಪುತ್ರ. ಚಿಕ್ಕ ಪ್ರಾಯದಲ್ಲೇ ತಂದೆಯನ್ನು ಕಳೆದುಕೊಂಡ ಸೃಜನ್ಗೆ ಕಲಿಕೆಯಲ್ಲಿ ಎಳವೆಯಿಂದಲೇ ಅತೀವ ಆಸಕ್ತಿದ್ದು ಮನೆಯಲ್ಲಿ ತೀರಾ ಬಡತನ. ತಾಯಿ ಸರೋಜಾ ಕುಲಾಲ್ ಕುಂದಾಪುರದಲ್ಲಿ ಟೈಲರಿಂಗ್ ಮಾಡಿಕೊಂಡಿದ್ದು, ಇಬ್ಬರು ಮಕ್ಕಳನ್ನು ಓದಿಸುತ್ತಿದ್ದಾರೆ. ಪಂಚಾಯತ್ ಅನುದಾನದಲ್ಲಿ ಹೆಮ್ಮಾಡಿಯಲ್ಲಿ ಮನೆಯೊಂದನ್ನು ಕಟ್ಟಿಕೊಂಡಿದ್ದಾರೆ. ಮನೆಯ ಕೆಲಸದ ಜತೆಗೆ ರಜೆ ಸಮಯದಲ್ಲೆಲ್ಲ ಸೃಜನ್ ವಾಹನದಲ್ಲಿ ಜ್ಯೂಸ್ ಸರಬರಾಜು ಕೆಲಸ ಮಾಡುತ್ತಿದ್ದ ಸೃಜನ್ ಎಸ್ಸೆಸ್ಸೆಲ್ಸಿಯಲ್ಲಿ 603 (96%) ಪಡೆದು ಮನೆ ಹಾಗೂ ಶಾಲೆಗೆ ಕೀರ್ತಿ ತಂದಿದ್ದ. ಇದೀಗ ಪಿಯುಸಿಯಲ್ಲೂ ಉತ್ತಮ ಸಾಧನೆ ಮಾಡಿದ್ದಾನೆ.
ಪಿಯುಸಿ ವಿಜ್ಞಾನ ವಿಭಾಗ ಪರೀಕ್ಷೆ : ಸೃಜನ್ ಕುಲಾಲ್ ಗೆ 93.16% ಅಂಕ
Students corner
1 Min Read


