ಮುದರಂಗಡಿಯಲ್ಲೊಂದು ಮನಕಲಕುವ ಕರುಣಾಜನಕ ಕಥೆ
ಉಡುಪಿ(ಕುಲಾಲ ವರ್ಲ್ಡ್ ಡಾಟ್ ಕಾಮ್): ತಲೆಯ ಮೇಲೆ ಸಣ್ಣದೊಂದು ಸೂರು, ಮನೆಯೊಳಗೆ ಖಾಯಿಲೆಯಿಂದ ಹಾಸಿಗೆ ಹಿಡಿದಿರುವ ಅಪ್ಪ, ಅಮ್ಮ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಸಹೋದರ… ಕುಟುಂಬದ ಹೊಣೆ ಹೊತ್ತು ಬಸವಳಿದು ಸೋತು ಹೋಗಿರುವ ಏಕೈಕ ಮಗಳು. ಇದು ಉಡುಪಿ ಕಾಪು ಸಮೀಪದ ಮುದರಂಗಡಿಯ ಕೋಟಿ ಮೂಲ್ಯರ ಕುಟುಂಬದ ಕರುಣಾಜನಕ ಕಣ್ಣೀರ ಕಥೆ..
ವೃದ್ಧರಾದ ಕೋಟಿ ಮೂಲ್ಯ ಕಾಲು ನೋವು ಪೀಡಿತರಾಗಿ ಕೆಲಸ ಮಾಡಲಾಗದೇ ಏಳು ವರ್ಷ ಕಳೆದಿದೆ. ವಯಸು ಮೀರಿದರೂ ವಿವಾಹವಾಗದ ಮಗಳು ರೇವತಿ ಮನೆಯಲ್ಲೇ ಉಳಿದು ಸಾಲ ಸೋಲ ಮಾಡಿ ತಂದೆಗೆ ಚಿಕಿತ್ಸೆ ಕೊಡಿಸಿದ್ದಾರೆ. ನಿರಂತರ ಚಿಕಿತ್ಸೆಯ ಬಳಿಕ ಈಗ ಎದ್ದು ಕುಳಿತುಕೊಳ್ಳುವಷ್ಟು ಕೋಟಿ ಮೂಲ್ಯರು ಗುಣಮುಖರಾಗಿದ್ದಾರೆ. ಆದರೂ ತಿಂಗಳಿಗೆ ಔಷಧಿಗಾಗಿ ಒಂದಷ್ಟು ಖರ್ಚು ಮಾಡಲೇಬೇಕಾಗಿದೆ.
ಈ ನಡುವೆ ಕೋಟಿ ಮೂಲ್ಯರ ಪತ್ನಿ ಶಾರದಾ ಅವರೂ ಗರ್ಭಕೋಶದ ಖಾಯಿಲೆಗೆ ತುತ್ತಾಗಿದ್ದು, ಅವರಿಗೂ ಔಷಧಿಗಾಗಿ ಸಾವಿರಾರು ರೂ ಖರ್ಚಾಗುತ್ತಿದೆ. ಎಲ್ಲಕ್ಕಿಂತ ಮಿಗಿಲಾಗಿ ಮನೆಗೆ ಆಧಾರವಾಗಿದ್ದು, ಮನೆ ಖರ್ಚು ನೋಡಬೇಕಾಗಿದ್ದ ಕೋಟಿ ಮೂಲ್ಯರ ಮಗ ಜಯ ಮೂಲ್ಯ ಮಾನಸಿಕ ರೋಗಕ್ಕೆ ತುತ್ತಾಗಿ ವರ್ಷಗಳೇ ಕಳೆದಿದೆ. ಕೋಟಿ ಮೂಲ್ಯ-ಶಾರದಾ ದಂಪತಿಗಳ ಮಗಳು ರೇವತಿ ಅಪ್ಪಅಮ್ಮನ ಹಾಗೂ ಸಹೋದರನ ಆರೈಕೆಯ ಜೊತೆಗೆ ಕುಟುಂಬದ ನಿರ್ವಹಣೆಯ ದೊಡ್ಡ ಹೊರೆ ತಲೆಮೇಲೆ ಬಿದ್ದಿದೆ.
ಒಂದು ಕುಟುಂಬದಲ್ಲಿ ಒಬ್ಬರಿಗೆ ಸಮಸ್ಯೆ ಇದ್ದರೆ ಅದನ್ನು ನಿಭಾಯಿಸಬಹುದು. ಆದರೆ ಈ ಬಡಕುಟುಂಬದಲ್ಲಿ ಒಂದಲ್ಲಾ ಎಲ್ಲರೂ ಸಮಸ್ಯೆಗೆ ಸಿಲುಕಿದ್ದಾರೆ. ಇಡೀ ಮನೆಯಲ್ಲಿ ದುಡಿವ ಕೈ ಎಂದರೆ ಅದು ರೇವತಿ ಒಬ್ಬರು ಮಾತ್ರ. ಕಿತ್ತು ತಿನ್ನುವ ಬಡತನದ ಮಧ್ಯೆ ಎರಡು ದನಗಳನ್ನು ಸಾಕಿ, ಹಾಲು ಮಾರಿ ಲಭಿಸುವ ಅತ್ಯಲ್ಪ ಆದಾಯವೇ ಇವರಿಗಿರುವ ಏಕೈಕ ಆರ್ಥಿಕ ದಾರಿಯಾಗಿದ್ದು, ಹಾಸಿಗೆ ಹಿಡಿದ ಮೂವರನ್ನು ಬಿಟ್ಟು ಬೇರೆ ಕೆಲಸಕ್ಕೆ ಹೋಗುವುದಾದರೂ ಹೇಗೆ..? ಪುಟ್ಟ ಮನೆಯಲ್ಲಿ ಬದುಕು ಕಟ್ಟಿಕೊಂಡಿರುವ ಈ ಬಡ ಕುಟುಂಬಕ್ಕೆ ಮಾನವೀಯತೆ ಮೆರೆಯುವ ಜೀವಗಳಿಂದ ಸಹಾಯಹಸ್ತ ಬೇಕಾಗಿದೆ.
ಲಾಕ್ ಡೌನ್ ನಿಂದಾಗಿ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಈ ಅಸಹಾಯಕ ಕುಟುಂಬಕ್ಕೆಇತ್ತೀಚೆಗೆ ಹುಮಾನಿಟಿ ಸೇವಾ ಸಂಸ್ಥೆಯ ವತಿಯಿಂದ 25 ಸಾವಿರ ರೂಪಾಯಿ ಧನಸಹಾಯವನ್ನಿತ್ತು ಮಾನವೀಯತೆ ಮೆರೆದಿದ್ದನ್ನು ಈ ಕುಟುಂಬ ಕೃತಜ್ಞತಾ ಪೂರ್ವಕವಾಗಿ ಸ್ಮರಿಸಿದ್ದು, ಈ ಕುಟುಂಬಕ್ಕೆ ಸಹಾಯ ಹಸ್ತ ಚಾಚಲು ಸಿದ್ಧರಿರುವ ದಾನಿಗಳು ರೇವತಿ ಅವರ ಈ ಕೆಳಗಿನ ಬ್ಯಾಂಕ್ ಖಾತೆಗೆ ಧನಸಹಾಯ ನೀಡಬಹುದು.
REVATHI
SB A/C NO. 0638101006679
CANARA BANK
MUDARANGADI BRANCH
ifsc code: CNRB0000638
ವಿಳಾಸ :
ಕೋಟಿ ಮೂಲ್ಯ, ಹೊಸ್ಮಾರು ಮನೆ, ಹಲಸಿನಕಟ್ಟೆ ಪೋಸ್ಟ್
ಪಿಲಾರ್ ವಯಾ ಮುದರಂಗಡಿ, ಕಾಪು ತಾಲೂಕು ಉಡುಪಿ ಜಿಲ್ಲೆ
ಮೊಬೈಲ್ : 9535821742
(ಚಿತ್ರ-ಮಾಹಿತಿ : ರೋಶನ್ ಹುಮಾನಿಟಿ, ಹೇಮಂತ್ ಕುಮಾರ್)