ಬೆಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ದಕ್ಷಿಣ ಕನ್ನಡ ಕುಲಾಲ ಸಂಘ (ರಿ) ಬೆಂಗಳೂರು ಮತ್ತು ಕುಲಾಲ ಸಮಾಜ ಬೆಂಗಳೂರು ಈ ಎರಡೂ ಸಂಘಗಳ ಜಂಟಿ ವಿಶೇಷ ಸರ್ವ ಸದಸ್ಯರ ಸಭೆ ನ. 24ರಂದು ಬೆಂಗಳೂರಿನ ಶ್ರೀ ಜಗದ್ಗುರು ರೇಣಕಾಚಾರ್ಯ ಸಭಾಭವನದಲ್ಲಿ ಸಂಘದ ಅಧ್ಯಕ್ಷರುಗಳಾದ ಶ್ರೀ ಜಿ ಈಶ್ವರ ಮೂಲ್ಯ ಮತ್ತು ಶ್ರಿ ಪುರುಷೋತ್ತಮ ಚೆಂಡ್ಲ ಇವರುಗಳ ಅಧ್ಯಕ್ಷತೆಯಲ್ಲಿ ಜರುಗಿತು.
ಈ ಜಂಟಿ ವಿಷೇಶ ಸರ್ವ ಸದಸ್ಯರ ಸಭೆಯಲ್ಲಿ ಈ ಎರಡೂ ಸಂಘಗಳು ವಿಲೀನಗೊಂಡು “ಕುಲಾಲ ಸಂಘ ಬೆಂಗಳೂರು” ಎಂಬ ನೂತನ ಸಂಘವಾಗಿ ಅಸ್ತಿತ್ವಕ್ಕೆ ಬಂದಿದೆ. ಈ ಎರಡೂ ಸಂಘಗಳ ಧ್ಯೇಯೊದ್ದೇಶಗಳು, ಕಾರ್ಯವ್ಯಾಪ್ತಿ, ಕಾರ್ಯಚಟುವಟಿಕೆಗಳು ಒಂದೇ ತರನಾಗಿದ್ದ ಹಿನ್ನೆಲೆಯಲ್ಲಿ ಸರ್ವಸದಸ್ಯರ ಮತ್ತು ಹಿರಿಯ ಹಿತೈಷಿಗಳ ಒತ್ತಾಯ ಹಾಗೂ ಸಲಹೆ ಸೂಚನೆ ಮೇರೆಗೆ “ಒಗ್ಗಟ್ಟಿನಲ್ಲಿ ಬಲವಿದೆ” ಎಂಬ ನಾನ್ನುಡಿಯಂತೆ ಕುಲಾಲ ಜನಾಂಗದ ಸರ್ವತೋಮುಖ ಅಭಿವೃದ್ದಿಗಾಗಿ ಈ ಒಗ್ಗೂಡುವಿಕೆ ಸಹಕಾರವಾಗಿದೆ.
ಜಂಟಿ ವಿಶೇಷ ಸರ್ವ ಸದಸ್ಯರ ಸಭೆಯಲ್ಲಿ ಶ್ರೀ ದೇಜಪ್ಪ, ದರ್ಮದರ್ಶಿ ದುರ್ಗಾಪರಮೇಶ್ವರಿ ದೇವಸ್ಥಾನ ಬಾಚಕೆರೆ ಇವರು ಆಶೀರ್ವಚನ ಮಾಡಿದರು. ಮುಖ್ಯ ಅಥಿತಗಳಾಗಿ ಶ್ರೀ ಕೆ. ತಿಪ್ಪೆಸ್ವಾಮಿ, ಮಾನ್ಯ ಶಾಸಕರು ವಿಧಾನ ಪರಿಷತ್, ಡಾ. ಎಂ.ವಿ. ಕುಲಾಲ್, ನಿರ್ದೇಶಕರು ಶ್ರೀ ಮಂಜುನಾಥ ಆಸ್ಪತ್ರೆ ಕುಂದಾಪುರ, ಡಾ.ಅಣ್ಣಯ್ಯ ಕುಲಾಲ್, ಅಧ್ಯಕ್ಷರು ಭಾರತೀಯ ವೈದ್ಯ ಸಂಘ ಮಂಗಳೂರು ವಿಭಾಗ ಹಾಗೂ ಸಂಸ್ಥಾಪಕರು ಕುಲಾಲ ಕುಂಬಾರ ಯುವ ವೇದಿಕೆ ಇವರುಗಳು ಆಗಮಿಸಿದ್ದರು. ಕುಲಾಲ ಸಂಘದ ನೂತನ ಅಧ್ಯಕ್ಷರಾಗಿ ಶ್ರೀ ಪುರುಷೋತ್ತಮ ಚೆಂಡ್ಲ , ಗೌರವ ಆಧ್ಯಕರಾಗಿ ಶ್ರೀ ಈಶ್ವರ ಮೂಲ್ಯ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಶಂಕರ ಕುಲಾಲ್ ಜನ್ನಾಡಿ, ಖಜಾಂಜಿಯಾಗಿ ಸೇಸಪ್ಪ ಪೊಸಳ್ಳಿಯವರು ಆಯ್ಕೆಯಾದರು.
ಕುಲಾಲ ಸಂಘದ ಮಾಜಿ ಆಧ್ಯಕ್ಷರನ್ನು ಸನ್ಮಾನಿಸಲಾಯಿತು ಮತ್ತು ಕುಲಾಲ ಸಂಘದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಪ್ರತಿಭಾ ಪುರಸ್ಕಾರಗಳನ್ನು ನೀಡಲಾಯಿತು. ಬಳಿಕ ಸಾಂಸ್ಕ್ರತಿಕ ಹಾಗೂ ಮನೋರಂಜನೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು. ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.