ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್) : ಮಂಗಳೂರು ಮಹಾನಗರ ಪಾಲಿಕೆಯ ನೂತನ ಸದಸ್ಯರಾಗಿ ಆಯ್ಕೆಯಾದ ಕುಲಾಲ ಸಮಾಜದ ಕುಲಾಲ ಸಮಾಜದ ಮೂವರು ಅಭ್ಯರ್ಥಿಗಳಿಗೆ ಕರಾವಳಿ ಕುಲಾಲ-ಕುಂಬಾರ ಯುವ ವೇದಿಕೆ ವತಿಯಿಂದ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.
ಕನಾ೯ಟಕ ರಾಜ್ಯ ಕುಲಾಲ ಕುಂಬಾರ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟವನ್ನು ರಿಜಿಸ್ಟರ್ ಮಾಡುವ ಸಲುವಾಗಿ ಬೈಲಾದ ಅಂತಿಮ ತಯಾರಿ ಸಭೆ ನ.೨೪ರಂದು ನಗರದ ವುಡ್ ಲಾಂಡ್ ಹೋಟೆಲಿನಲ್ಲಿ ನಡೆಯಿತು. ಈ ಸಂದರ್ಭ ನೂತನ ಕಾರ್ಪೊರೇಟರ್ ಗಳಾದ ಲೀಲಾವತಿ ಪ್ರಕಾಶ್ ಕುಲಾಲ್ (ಕದ್ರಿ ಕಂಬ್ಳ ವಾರ್ಡ್), ಗಣೇಶ್ ಕುಲಾಲ್ ಉರ್ವ (ದೇರೆಬೈಲು ನೈರುತ್ಯ ವಾರ್ಡ್) ಹಾಗೂ ಲೋಕೇಶ್ ಕುಲಾಲ್ ಬೊಳ್ಳಾಜೆ(ಕಾಟಿಪಳ್ಳ ಪೂರ್ವ ವಾರ್ಡ್) ಅವರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭ ರಾಜ್ಯ ಹಾಗೂ ಜಿಲ್ಲೆಯ ವಿವಿಧ ವಿಧಾನಸಭೆ ವ್ಯಾಪ್ತಿಯ ಕುಲಾಲ ಸಂಘಟನೆಗಳ ಹಿರಿ ಕಿರಿಯ ನಾಯಕರು ಉಪಸ್ಥಿತರಿದ್ದರು.