ಬಂಟ್ವಾಳ(ಕುಲಾಲ ವರ್ಲ್ಡ್ ಡಾಟ್ ಕಾಮ್) : ಕುಲಾಲ ಸಮಾಜ ಸೇವಾ ಸಂಘ(ರಿ.) ಬ್ರಹ್ಮಾವರ ಇವರ ವಾಷಿ೯ಕ ಮಹಾಸಭೆ,ಸತ್ಯನಾರಾಯಣ ಪೂಜೆ ಹಾಗೂ ವಿದ್ಯಾ ಪ್ರೋತ್ಸಾಹಧನ ವಿತರಣಾ ಕಾಯ೯ಕ್ರಮ ಶಾರದ ಪ್ರೌಢ ಶಾಲೆ ಚೇಕಾ೯ಡಿಯಲ್ಲಿ ಸಂಘದ ಅಧ್ಯಕ್ಷರಾದ ರಾಜೀವ ಕುಲಾಲ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾಯ೯ಕ್ರಮದಲ್ಲಿ ಉಡುಪಿ ಶಾಸಕರಾದ ಶ್ರೀ ಕೆ.ರಘುಪತಿ ಭಟ್ ಉಪಸ್ಥಿತರಿದ್ದರು. ಮಂಗಳೂರು IMA ಅಧ್ಯಕ್ಷರಾದ ಡಾ. ಅಣ್ಣಯ್ಯ ಕುಲಾಲ್ ದೀಪ ಬೆಳಗಿಸಿ ಉದ್ಘಾಟಿಸಿದರು. ಗುರು ರಾಘವೇಂದ್ರ ಸೊಸೈಟಿ ಉಡುಪಿ ಅಧ್ಯಕ್ಷರಾದ ಶ್ರೀ ಸತೀಶ್ ಕುಲಾಲ್ ಕಡಿಯಾಳಿ,ಕುಂಬಾರರ ಗುಡಿ ಕೈಗಾರಿಕಾ ಸೊಸೈಟಿ ಪೆಡೂ೯ರು ಇದರ ಅಧ್ಯಕ್ಷರಾದ ಶ್ರೀ ಸಂತೋಷ್ ಕುಲಾಲ್ ಪಕ್ಕಾಲ್, ಶಾಲಾ ಮುಖ್ಯೋಪಧ್ಯಾಯರಾದ ಶ್ರೀ ಸಿ.ಮಂಜುನಾಥ ನಾಯ್ಕ್ , ಕರಾವಳಿ ಕುಲಾಲ ಯುವ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷರಾದ ಶ್ರೀ ಸತೀಶ್ ಕುಲಾಲ್ ನಡೂರು, ಸಂಘದ ಗೌರವ ಅಧ್ಯಕ್ಷರಾದ ಶ್ರೀ ಮಂಜುನಾಥ ಕುಲಾಲ್ ಕೀತಿ೯ನಗರ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಕಾಯ೯ಕ್ರಮದಲ್ಲಿ ಆಯ೯ಭಟ ಪ್ರಶಸ್ತಿ ಪುರಸ್ಕೃತ ಅಣ್ಣಯ್ಯ ಕುಲಾಲ್, ಪ್ರಶಸ್ತಿ ಪುರಸ್ಕೃತ ಯುವ ಕಥೆಗಾರ ಶ್ರೀ ಮಂಜುನಾಥ ಹಿಲಿಯಾಣ, ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ವಿಜೇತ ಕರಾಟೆಪಟು ಪ್ರಜಿತ್ ಕುಲಾಲ್ ಬೈಕಾಡಿ, ಉಡುಪಿ ಜಿಲ್ಲಾ ಆದಶ೯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಶ್ರೀ ಸಿ. ಮಂಜುನಾಥ ನಾಯ್ಕ್, ಸಂಘದ ನಿಕಟಪೂವ೯ ಅಧ್ಯಕ್ಷರಾದ ಶ್ರೀ ಸುಧಾಕರ ಕುಲಾಲ್ ಕನ್ನಾರು ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
25 ವಿದ್ಯಾಥಿ೯ಗಳಿಗೆ ವಿದ್ಯಾ ಪ್ರೋತ್ಸಾಹಧನ ವಿತರಿಸಲಾಯಿತು. ಪ್ರಾಕೃತಿಕ ವಿಕೋಪದಿಂದ ಮನೆ ಕಳಕೊಂಡ 5 ಮಂದಿಗೆ ಹಾಗೂ ಅನಾರೋಗ್ಯ ಪೀಡಿತರಾದ 3 ಮಂದಿಗೆ ಸಂಘದಿಂದ ಆಥಿ೯ಕ ಸಹಾಯ ಮಾಡಲಾಯಿತು.
ಕಾಯ೯ಕ್ರಮದಲ್ಲಿ ಕುಲಾಲ ಯುವ ವೇದಿಕೆ ಉಡುಪಿ ವಿಧಾನಸಭಾ ಘಟಕದ ಪದಾಧಿಕಾರಿಗಳ ಪದಗ್ರಹಣ ನಡೆಸಲಾಯಿತು. ಉಪಾಧ್ಯಕ್ಷರಾದ ಗಣೇಶ್ ಕುಲಾಲ್ ಸ್ವಾಗತಿಸಿದರು, ಕಾಯಾ೯ಧ್ಯಕ್ಷರಾದ ಬಸವರಾಜ್ ಕುಲಾಲ್ ಪ್ರಸ್ತಾವನೆಗೈದರು, ಕಾಯ೯ದಶಿ೯ ಸುರೇಶ್ ಕುಲಾಲ್ ವರದಿ ಮಂಡಿಸಿದರು.
ಜೊತೆ ಕಾಯ೯ದಶಿ೯ ಸುಧೀರ್ ಕುಲಾಲ್ ಹಾಗೂ ಕ್ರೀಡಾ ಕಾಯ೯ದಶಿ೯ ಅಜಿತ್ ಕುಲಾಲ್ ಸನ್ಮಾನ ಪತ್ರ ವಾಚಿಸಿದರು. ಮಂಜುನಾಥ ಹಿಲಿಯಾಣ ಹಾಗೂ ಕುಮಾರಿ ಸುಪ್ರೀತ ಕುಲಾಲ್ ಕಾಯ೯ಕ್ರಮ ನಿರೂಪಿಸಿದರು, ಕೋಶಾಧಿಕಾರಿ ವಿಶ್ವನಾಥ ಕುಲಾಲ್ ವರದಿ ಮಂಡಿಸಿ ಧನ್ಯವಾದ ಸಮಪ೯ಣೆ ಮಾಡಿದರು.