ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮಂಗಳೂರು ಕದ್ರಿಯ ನಿಶಾ ಕುಲಾಲ್ ಅವರು ಥೈಲ್ಯಾಂಡ್ನಲ್ಲಿ ಇತ್ತೀಚೆಗೆ ನಡೆದ ಏಷಿಯನ್ ಕಾಂಟಿನೆಂಟಲ್ ರೋಪ್ ಸ್ಕಿಪ್ಪಿಂಗ್ ಚಾಂಪಿಯನ್ಶಿಪ್ ನಲ್ಲಿ ಎರಡು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಪಡೆದಿದ್ದಾರೆ. ಭಾರತವನ್ನು ಪ್ರತಿನಿಧಿಸಿದ್ದ ತಂಡದಲ್ಲಿ ನಿಶಾ ಕುಲಾಲ್ ಸಿಂಗಲ್ ರೋಪ್ ಸ್ಪೀಡ್ ರಿಲೇಯಲ್ಲಿ ಬೆಳ್ಳಿ, ಡಬಲ್ ಡಚ್ ಫ್ರೀ ಸ್ಟೈಲ್ನಲ್ಲಿ ಬೆಳ್ಳಿ ಹಾಗೂ ಡಬಲ್ ಡಚ್ ಸ್ಪೀಡ್ ರಿಲೇಯಲ್ಲಿ ಕಂಚಿನ ಪದಕ ಗಳಿಸಿದ್ದಾರೆ.

ಭಾರತ, ಪಾಕಿಸ್ತಾನ, ಸಿಂಗಾಪುರ, ಹಾಂಕಾಂಗ್, ಫಿಲಿಫೀನ್ಸ್, ಖಜಕಿಸ್ತಾನ್, ಕೊರಿಯಾ, ಥೈಲ್ಯಾಂಡ್ ಸೇರಿ 9 ರಾಷ್ಟ್ರಗಳ ಕ್ರೀಡಾಪಟುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮಂಗಳೂರಿನ ಕದ್ರಿಯ ಅಹಲ್ಯಾ ಅವರ ಪುತ್ರಿಯಾಗಿರುವ ನಿಶಾ ಸೈಂಟ್ ಆ್ಯಗ್ನೆಸ್ ಪಿಯು ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಏಳನೇ ತರಗತಿಯಲ್ಲಿರುವಾಗಲೇ ರೋಪ್ ಸ್ಕಿಪ್ಪಿಂಗ್ ನಲ್ಲೋ ಚಿನ್ನದ ಪದಕ ಗಳಿಸಿದ್ದರು.
ಇವರು ರಾಷ್ಟ್ರಮಟ್ಟದ ಖೋ ಖೋ, ಬ್ಯಾಡ್ ಮಿಂಟನ್, ಡಾನ್ಸ್ ಮತ್ತು ಡ್ರಾಯಿಂಗ್ ಸ್ಪರ್ಧೆಯಲ್ಲೂ ಭಾಗವಹಿಸಿ ಬಹುಮಾನ ಗಳಿಸಿದ್ದಾರೆ. ಪ್ರಸ್ತುತ ಇವರು ರಾಜೇಶ್ ಹಾಗೂ ಸಂದೀಪ್ ಅವರ ಬಳಿ ಕ್ರೀಡಾ ತರಬೇತಿ ಪಡೆಯುತ್ತಿದ್ದಾರೆ.







