ಬಂಟ್ವಾಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಆ ಮನೆಗೆ ವೃದ್ಧ ತಾಯಿಯೇ ಆಧಾರಸ್ತಂಭ. ಆಕೆಗೆ ಆಧಾರವಾಗಬೇಕಿದ್ದ ಪುತ್ರರಿಬ್ಬರು ಕಾಲಿನ ಬಲವನ್ನೇ ಕಳೆದುಕೊಂಡು ಚಾಪೆ ಹಿಡಿದಿದ್ದಾರೆ. ಛಲದಿಂದ ಬದುಕುಕೊಟ್ಟಿಕೊಳ್ಳಬೇಕು ಎಂಬ ಕನಸುಕಂಗಳಲ್ಲಿದ್ದ ಈ ಯುವಕರ ಕುಟುಂಬಕ್ಕೆ ಆರ್ಥಿಕ ಬಲವೂ ಇಲ್ಲ. ಇದು ಬಂಟ್ವಾಳ ತಾಲೂಕಿನ ನೆಲ್ಲಿಗುಡ್ಡೆ ಕಲಿಂಜದ ದಿ. ಪರಮೇಶ್ವರ ಮೂಲ್ಯ ಅವರ ಪತ್ನಿ ಕಮಲಾ ಅವರ ಕುಟುಂಬದ ಶೋಚನೀಯ ಸ್ಥಿತಿ..
ಮಕ್ಕಳಾದ ವಸಂತ ಮೂಲ್ಯ (25 ವರ್ಷ) ಹಾಗೂ ಉಮೇಶ್ ಮೂಲ್ಯ (23ವರ್ಷ) ಇಬ್ಬರೂ ಕಾಲಿನ ಬಲ ಕಳೆದುಕೊಂಡು ನಡೆಯಲು ಆಗದ ಪರಿಸ್ಥಿತಿಯಲ್ಲಿದ್ದಾರೆ . ಮೊದಲಿಗೆ ಉಮೇಶ್ ನ ಬಲ ಕಾಲಿನಲ್ಲಿ ತೊಂದರೆ ಉಂಟಾಗಿತ್ತು. ಇದಕ್ಕೆ ಮಂಗಳೂರಿನ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಆಪರೇಶನ್ ಮಾಡಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಆ ಬಳಿಕ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಆಪರೇಶನ್ ಮಾಡಿ ಸುಮಾರು 3 ಲಕ್ಷಕ್ಕೂ ಹೆಚ್ಚು ಖರ್ಚಾಗಿತ್ತು. ಇಷ್ಟೆಲ್ಲಾ ಆದರೂ ಯಾವುದೇ ಪ್ರಯೋಜನವಾಗದೇ ಇಂದಿಗೂ ಅವರು ದುಡಿಯಲಾಗದ ಪರಿಸ್ಥಿಯಲ್ಲಿದ್ದಾನೆ.
ತಮ್ಮನ ಚಿಕಿತ್ಸೆಯ ವೆಚ್ಚ ಹಾಗೂ ಮನೆ ಖರ್ಚು ವೆಚ್ಚಗಳನ್ನು ಅಣ್ಣನಾದ ವಸಂತ ಹೋಟೆಲ್ ಒಂದರಲ್ಲಿ ದುಡಿದು ನೋಡಿಕೊಳ್ಳುತ್ತಿದ್ದ. ಆದರೆ ವಿಧಿಯಾಟ ಘೋರ ಎಂಬಂತೆ ಒಂದು ದಿನ ಕೆಲಸ ಮುಗಿಸಿ ಬರುವಾಗ ರಿಕ್ಷಾ ಅಪಘಾತವಾಗಿ ಕಾಲಿಗೆ ಬಲವಾದ ಪೆಟ್ಟುಬಿದ್ದು ಆತನೂ ನಡೆಯಲಾಗದಂತ ಪರಿಸ್ಥಿತಿಗೆ ತಲುಪಿದ್ದಾನೆ. ಈಗ ಇಬ್ಬರು ಮಕ್ಕಳೂ ಮಂಗಳೂರಿನ ಏಜೆ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಚಿಕಿತ್ಸೆಗೆ ಸುಮಾರು 3ಲಕ್ಷ ರೂ. ಖರ್ಚಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಮಕ್ಕಳಿಬ್ಬರ ಚಾಕರಿ ಮಾಡುತ್ತಾ ಬೀಡಿ ಕಟ್ಟಿ ಸಂಸಾರ ನಿರ್ವಹಿಸಲು ಹೆಣಗಾಡುತ್ತಿರುವ ತಾಯಿ ಕಮಲಾ ಅವರಿಗೆ ಈಗ ದಿಕ್ಕು ತೋಚದಂತಾಗಿದೆ ಎಂದು ಅವರು ಕಣ್ಣೀರಾಗುತ್ತಾರೆ. ಕುಟುಂಬಕ್ಕೆ ಆರ್ಥಿಕ ಬೆಂಬಲವಾಗಿದ್ದ ಮಕ್ಕಳೇ ಹಾಸಿಗೆ ಹಿಡಿದರೆ ತಾಯಿಯ ಪರಿಸ್ಥಿತಿ ಹೇಗಾಗಬೇಡ ? ಮಕ್ಕಳ ವೈದ್ಯಕೀಯ ಖಚು೯ ವೆಚ್ಚಗಳನ್ನು ಭರಿಸಲು ಅವರು ಅಶಕ್ತರಾಗಿದ್ದು, ಇನ್ನೊಂದೆಡೆ ಮನೆಯ ನಿರ್ವಹಣೆ ಮಾಡಬೇಕಾಗಿದೆ. ವಯಸ್ಸಾಗುತ್ತಿರುವ ಕಾರಣ ಏನು ಮಾಡಬೇಕೆನ್ನುವ ಯೋಚನೆಯಲ್ಲಿಯೇ ದಿನದೂಡುತ್ತಿದ್ದಾರೆ.
ಆರ್ಥಿಕ ಸಂಕಷ್ಟದಲ್ಲಿರುವ ಇವರಿಗೆ ಸಹಾಯ ಮಾಡಲಿಚ್ಛಿಸುವ ದಾನಿಗಳಿದ್ದರೆ ಅವರ ಪುತ್ರನ ಕೆಳಗಿನ ಖಾತೆಗೆ ಹಣ ಕಳಿಸಿ ಸಹಕರಿಸಿ.
VASANTHA
SYNDICATE BANK
KAVALA PADUR ,VOGGA BRANCH, D.K Dist.
Ac/no :01932030001788
IFSC CODE :SYNB0000193
Mobile No: 9741484290