ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ವಿದ್ಯೆ ಕಲಿಸುವ ಶಿಕ್ಷಕರಿಗೆ ಸಹನೆ ತಾಳ್ಮೆ ಅತೀ ಅಗತ್ಯವಾಗಿದು, ಶಿಕ್ಷೆಯೇ ಶಿಕ್ಷಣವಾಗಬಾರದು, ಶಿಕ್ಷಕರು ಎಲ್ಲರಿಗಿಂತ ಶ್ರೇಷ್ಠರು, ಅವರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಅಭಿನಂದನಿಯ ಎಂದು , ಹಿರಿಯ ಪತ್ರಕರ್ತ,ಬಿಂಬ ಧ್ವನಿ ಪತ್ರಿಕೆಯ ಸಂಪಾದಕ ಚಿದಂಬರ ಬೈಕಂಪಾಡಿ ನುಡಿದರು.
ಅವರು ಕುಲಾಲ ಸಂಘ ಕುಳಾಯಿ, ಕುಲಾಲ ಮಹಿಳಾ ಮಂಡಲ ಹಾಗೂ ಕುಲಾಲ ರಜತ ಸೇವಾ ಟ್ರಸ್ಟ್ ನ ವತಿಯಿಂದ ಕುಳಾಯಿ ವೆಂಕಟರಮಣ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಆಯೋಜಿಸಿ ದ `ಗುರುವಿಗೊಂದು ನಮನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಸಮನ್ವಯ ಸಂಪನ್ಮೂಲ ಶಿಕ್ಷಕಿ ರವಿಕಲಾ ದಿನಕರ್ ಮಾತನಾಡಿ, ಪ್ರಾಮಾಣಿಕವಾಗಿ ಸೇವೆ ಮಾಡುತ್ತಿರುವ ಶಿಕ್ಷಕರು ಸಮಾಜದಲಿ ಇತರರಿಗೆ ಮಾದರಿಯಾಗಿದ್ದಾರೆ, ಶಿಕ್ಷಣದ ಮೌಲ್ಯವನ್ನು ಉಳಿಸುವ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು. ಈ ಸಂದರ್ಭ ನಿವೃತ್ತ ಶಿಕ್ಷಕರಾದ ಸರಸ್ವತಿ ವಿ, ಹಾಗೂ ಶಶಿಕಲಾ ಎಂ ಇವರನ್ನು ಸನ್ಮಾನಿಸಲಾಯಿತು. ಅಲ್ಲದೆ ಸಂಘದ ವ್ಯಾಪ್ತಿಯ 27 ಮಂದಿ ಶಿಕ್ಷಕರನ್ನು ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಗಂಗಾಧರ್ ಕೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ವೇದಿಕೆಯಲ್ಲಿ ಸಹಾಯಕ ಹಣಕಾಸು ನಿಯಂತ್ರಣ, ಕೃಷಿ ವಿಶ್ವ ವಿದ್ಯಾಲಯ ಬೆಂಗಳೂರು ಇದರ ನಿವೃತ್ತ ಅಧಿಕಾರಿ ನರಸಿಂಹ ಸುರತ್ಕಲ್, ಕುಲಾಲ ರಜತ ಸೇವಾ ಟ್ರಸ್ಟ್ ನ ಅಧ್ಯಕ್ಷ ಮೋಹನ್ ಐ ಮೂಲ್ಯ, ಮಹಿಳಾ ಮಂಡಲ ಅಧ್ಯಕ್ಷೆ ಮೀರಾ ಮೋಹನ್ ಅತಿಥಿಗಳಾಗಿ ಭಾಗವಹಿಸಿದ್ದರು.
. ಗಣೇಶ್, ಜನಾರ್ಧನ್ ಸಾಲಿಯಾನ್, ಕುಮಾರ್ ಕಾವಿನ ಕಲ್ಲು, ಗಣೇಶ್ ಕುಲಾಲ್, ಹರೀಶ್ ಕುಲಾಲ್, ಶ್ರೀನಾಥ್ ವಂಶಿ, ಚೆನ್ನಪ್ಪ ಕುಲಾಲ್, ಮೋಹನ್ ಕಾವಿನ ಕಲ್ಲು, ಗಣೇಶ್ ಅಂಚನ್, , ಮಹಿಳಾ ಮಂಡಲದ ಶ್ವೇತಾ ಪುರುಷೋತ್ತಮ್, ತಾರಾ ಚಂದ್ರಹಾಸ್, ಭಾರತಿ ಗಂಗಾಧರ್, ಜಯಂತಿ ಕೆ ರಾಜೀವಿ ಹರೀಶ್, ಸುಷ್ಮಾ ಗಣೇಶ್, ಕುಮಾರಿ ರಕ್ಷಾ, ಉಮಾ ಯಾದವ್, ಶೋಭಾ ವಿಶ್ವನಾಥ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಿರೀಕ್ಷ ಡಿ ಬಂಗೇರ ಪ್ರಾರ್ಥಿಸಿದರು. ಜಯೇಶ್ ಗೋವಿಂದ್ ಪ್ರಸ್ತಾವನೆಗೈದು ಸ್ವಾಗತಿಸಿದರು. ಕಾರ್ಯದರ್ಶಿ ಗಂಗಾಧರ್ ಬಂಜನ್ ಧನ್ಯವಾದ ಸಮರ್ಪಿಸಿದರು. ನಾಗೇಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.