
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಸರಕಾರಿ ಶಾಲೆಯಲ್ಲಿ ಕಲಿತು ಎಸೆಸೆಲ್ಸಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಮೂರನೇ ಸ್ಥಾನ ಗಳಿಸಿದ ಗುರುವಾಯನಕೆರೆಯ ತೇಜಸ್ವಿನಿ ಅವರು ಜಿಲ್ಲಾಡಳಿತ ವತಿಯಿಂದ ನೀಡಲಾಗುವ ಉಚಿತ ಲ್ಯಾಪ್ ಟಾಪ್ ಪಡೆದಿರುತ್ತಾರೆ. ಕಳೆದ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಗುರುವಾಯನಕೆರೆ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯಾಗಿದ್ದ ತೇಜಸ್ವಿ .ಕೆ. ಅವರು 97.92% (612 out of 625) ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು. ಇವರು ಕೂಲಿ ಕಾರ್ಮಿಕ, ಮದ್ದಡ್ಕ ಕುಂಜಲೊಟ್ಟು ಮನೆಯ ಹರಿಯಪ್ಪ ಮೂಲ್ಯ ಮತ್ತು ಬೀಡಿ ಕಾರ್ಮಿಕರಾದ ಬೇಬಿ ದಂಪತಿಗಳ ಸುಪುತ್ರಿಯಾಗಿದ್ದು, ಪ್ರಸ್ತುತ ಇವರು ಉಜಿರೆ ಎಸ್ ಡಿ ಎಂ ಕಾಲೇಜಿನಲ್ಲಿ ಪಿಯುಸಿ ಕಲಿಯುತ್ತಿದ್ದಾರೆ.

