ಕಿನ್ನಿಗೋಳಿ (ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಕುಲಾಲ ಜವನೆರ್ ತೋಕೂರು ಇದರ ವತಿಯಿಂದ ಆರೋಗ್ಯ ಸಂಬಂಧಿತ ಸಮಸ್ಯೆಯಿಂದ ಬಳಲುತಿದ್ದ ಮೂರು ಜನ ಅಶಕ್ತ ರೋಗಿಗಳಿಗೆ ರೂ. 23000/- ಸಹಾಯಧನ ನೀಡಿ ಅವರಿಗೆ ಸಾಂತ್ವನ ತುಂಬಲಾಯಿತು.
ಹಳೆಯಂಗಡಿ ಇಲ್ಲಿನ ಸುಬ್ರಹ್ಮಣ್ಯ ನಗರದ ನಿವಾಸಿ ಸವಿತ-ಸುಧಾಕರ ಮೂಲ್ಯ ದಂಪತಿಯ ಪುತ್ರಿ 13 ವರ್ಷದ ಬಾಲಕಿ ಸಾಕ್ಷಿ ಬಾಲ್ಯದಿಂದ ಅಂಗವಿಕಲತೆಯಿಂದ ಆಕೆ ಮಲಗಿದಲ್ಲಿಯೇ ಇದ್ದು, ಮಾತನಾಡಲು ಆಗದೆ, ಕೈಕಾಲುಗಳಲ್ಲಿ ಬಲವಿಲ್ಲದೆ, ಎದ್ದುನಿಲ್ಲಲೂ ಅಸಮರ್ಥಳಾಗಿದ್ದು, ಈಗಲೂ ತಂದೆ ತಾಯಿಯನ್ನೇ ತನ್ನ ದೈನಂದಿನ ಚಟುವಟಿಕೆಗಳಿಗೆ ಅವಲಂಬಿಸಿರಬೇಕಾಗಿರುವ ದಾರುಣ ಸ್ಥಿತಿಯಲ್ಲಿ ಇರುದಾಗಿದೆ. ಈಕೆಯ ಚಿಕಿತ್ಸೆಗೆ ರೂ.17,000/- ಸಹಾಯಧನ ನೀಡಲಾಯಿತು. ತೋಕೂರು ಸಮೀಪದ ನಿವಾಸಿ ಹೊಟ್ಟೆಯ ಸರ್ಜರಿಗೆ ಒಳಗಾಗಿದ್ದ ರಾಜೀವಿ ಕುಲಾಲ್ ಅವರ ಮೆಡಿಸಿನ್ ವೆಚ್ಚಕ್ಕೆ ರೂ. 3000/- ಸಹಾಯಧನ ನೀಡಲಾಯಿತು. ಕಿನ್ನಿಗೋಳಿ ಪದ್ಮನೂರು ನಿವಾಸಿ ಗೀತಾ ಕುಲಾಲ್ ಅವರ ಪತಿಯು ನರದ ಸಮಸ್ಯೆಯಿಂದ ಬಳಲುತ್ತಿದ್ದು ಅವರ ಮೆಡಿಸಿನ್ ವಚ್ಚಕ್ಕೆ ರೂ. 3000/- ಸಹಾಯಧನ ನೀಡಲಾಯಿತು. ಹೀಗೆ ಒಟ್ಟು ರೂ. 23000/- ಸಹಾಯಧನ ನೀಡಿ ಮೂರು ಕುಟುಂಬಗಳ ನೋವಿಗೆ ಮಿಡಿಯುವ ಪ್ರಯತ್ನ ಮಾಡಲಾಯಿತು. ಈ ಸಂಧರ್ಭದಲ್ಲಿ ಕುಲಾಲ ಜವನೆರ್ ತೋಕೂರು ಇದರ ಸದಸ್ಯರು ಮತ್ತು ಮಹಿಳಾ ಘಟಕದ ಸದಸ್ಯರು ಉಪಸ್ಥಿತರಿದ್ದರು.