ಪುತ್ತೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಅಂತಾರಾಷ್ಟ್ರೀಯ ಒಕಿನವನ್ ಗೊಜು-ರ್ಯು ಕರಾಟೆ ಮಲೈಷಿಯಾ ಆಶ್ರಯದಲ್ಲಿ ಮಲೈಷಿಯಾದಲ್ಲಿ ನಡೆದ 2019ನೇ ಸಾಲಿನ ಅಂತಾರಾಷ್ಟ್ರೀಯ ಕರಾಟೆ- ಡು ಓಪನ್ ಚಾಂಪಿಯನ್ ಶಿಪ್ ನಲ್ಲಿ ವಿಟ್ಲ ಬ್ರಾಣಪಾದೆಯ ಅಯ್ಯಪ್ಪ ಮೂಲ್ಯ ಹಾಗೂ ಶಾಲಿನಿ ದಂಪತಿ ಪುತ್ರಿ ನಿವೇದಿತಾ ರವರು ‘ಕುಮೇಟು’ಇವೆಂಟ್ ನಲ್ಲಿ ದ್ವಿತೀಯ ಮೆಡಲ್ ಹಾಗೂ ‘ಕಟಾ’ ಇವೆಂಟ್ ನಲ್ಲಿ ತೃತೀಯ ಮೆಡಲ್ ಗಳಿಸಿದ್ದು, ರಾಷ್ಟ್ರಕ್ಕೆ ಹೆಮ್ಮೆ ತಂದುಕೊಟ್ಟಿದ್ದಾರೆ.
ವಿಟ್ಲ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷ ಪಿಯುಸಿ ಯಲ್ಲಿ ವ್ಯಾಸಂಗ ಮಾಡುತ್ತಿರುವ ನಿವೇದಿತಾ ರವರು ಈ ಹಿಂದೆ ನಡೆದ ಹಲವಾರು ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಚಿನ್ನ, ಬೆಳ್ಳಿ ಮೆಡಲ್ ಪಡೆದಿದ್ದರು. ಮಾಧವ ಅಳಿಕೆ ಯವರಿಂದ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.


