ಮೈಸೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಟ್ರಿನಿಟಿ ಸ್ಕೂಲ್ ಆಫ್ ಲಂಡನ್ ನಿಂದ ನಡೆಸುವ ರಿದಂ (ಡ್ರಮ್ಸ್ ವಾದನ) ಪರೀಕ್ಷೆಯಲ್ಲಿ 1,2 ಹಾಗೂ 3 ಗ್ರೇಡ್ ನಲ್ಲಿ ಡಿಸ್ಟಿಂಕ್ಷನ್ ಪಡೆದು ಉತ್ತೀರ್ಣಳಾದ ಕರ್ನಾಟಕದ ಮೊಟ್ಟಮೊದಲ ಬಾಲಕಿ ಕು. ರಚನಾ ವರ್ಷ ಅವರು “ಡಾಟರ್ ಆಫ್ ದ ಇಯರ್ – 2019” ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಜು.೭ರಂದು ಮೈಸೂರು ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಪಬ್ಲಿಕ್ ರಿಲೇಶನ್ಸ್ ಕಮ್ಯುನಿಕೇಶನ್ಸ್ ವತಿಯಿಂದ ನಡೆದ “ಮಗಳ ದಿನಾಚರಣೆ” ಸಮಾರಂಭದಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಹೇಮಂತ ಕುಮಾರ್, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಕೆ.ಆರ್.ವೇಣುಗೋಪಾಲ್, ಮೈಸೂರಿನ ಮೇಯರ್ ಶ್ರೀಮತಿ ಪುಷ್ಪಲತಾ ಜಗನ್ನಾಥ್, ಪಿ.ಎಸ್.ಐ ನ ರಾಷ್ಟ್ರೀಯ ಅಧ್ಯಕ್ಷ ಎಂ.ಬಿ.ಜಯರಾಮ್ ಮೊದಲಾದವರು ಈ ಪ್ರಶಸ್ತಿ ನೀಡಿ ಗೌರವಿಸಿದರು. ರಚನಾ ಅವರು ಕುಂಬಾರ ಸಮಾಜದ ನಾಯಕ, ಕ್ರೆಡಿಟ್ ಐ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಡಾ. ಎಂ.ಪಿ ವರ್ಷ ಅವರ ಸುಪುತ್ರಿ.


