ಬಂಟ್ವಾಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಜೂನ್ 6ರಂದು ಗಂಜಿಮಠದಲ್ಲಿ ಬಾವಿಯ ಕಾಂಕ್ರೀಟ್ ಮುಚ್ಚುವ ವೇಳೆ ಕಾಂಕ್ರೀಟ್ ಕುಸಿದು ಮೃತಪಟ್ಟ ಬಡಕೂಲಿ ಕಾರ್ಮಿಕ ವೆಂಕಪ್ಪ ಮೂಲ್ಯ ಬೊಟ್ಟು ಇವರ ಕುಟುಂಬಕ್ಕೆ ಕುಲಾಲ ಸುಧಾರಕ ಸಂಘ ಸಂಗಬೆಟ್ಟು ಸಿದ್ಧಕಟ್ಟೆ ಇದರ ಸಂಘದ ಸದಸ್ಯರಿಂದ ಸಂಗ್ರಹಿಸಿದ ರೂ.50,000/- ಧನ ಸಹಾಯವನ್ನು ಸಂಘದ ಅಧ್ಯಕ್ಷರಾದ ವಸಂತ ಓಣಿದಡಿ ಮೃತರ ಪತ್ನಿಗೆ ಹಸ್ತಾಂತರಿಸಿದರು.
ಸಂಗಬೆಟ್ಟು ಗ್ರಾಮ ಪಂಚಾಯತ್ ಸದಸ್ಯೆ ವಿಮಲಾ ಮೋಹನ್, ಸಂಘದ ನಿಕಟಪೂರ್ವ ಅಧ್ಯಕ್ಷರುಗಳಾದ ಮೋಹನ್ ಜಿ ಮೂಲ್ಯ, ಭೋಜ ಮೂಲ್ಯ ಸೂರ್ಯ, ಕೋಶಾಧಿಕಾರಿ ಗೀತಾ ಕುದ್ಕೋಳಿಬೈಲು, ಸಾಂಸ್ಕೃತಿಕ ಕಾರ್ಯದರ್ಶಿ ಮಮತಾ ಉಮೇಶ್ ಸೂರ್ಯ, ಸಂಘಟನಾ ಕಾರ್ಯದರ್ಶಿಗಳಾದ ಯಶೋಧರ ಕುಲಾಲ್ ಮಜಲೋಡಿ, ಸೀತಾ ಸದಾಶಿವ ಸೂರ್ಯ, ಸಂಘದ ಸದಸ್ಯರಾದ ಉದಯ ಟಿ. ಪಾರೆಟ್ಟು, ಗುರುವಪ್ಪ ಕುಲಾಲ್ ಪಾರೆಟ್ಟು , ರಾಜೇಶ್ ಮಾಲ್ದಾಡು, ಸುಂದರಿ ಬೊಟ್ಟು, ಗೀತಾ ಸೂರ್ಯ, ಸುಶೀಲಾ ಎದ್ರುಗುಡ್ಡೆ, ಲತನ್ ಸೂರ್ಯ, ಹಂಸಿಕಾ ಸೂರ್ಯ, ಯಶ್ವಿತ್ ಸೂರ್ಯ, ಹರ್ಷಿತ್ ಸೂರ್ಯ ಉಪಸ್ಥಿತರಿದ್ದರು.
ಕಾಂಕ್ರೀಟ್ ಕುಸಿದು ಮೃತಪಟ್ಟ ಕೂಲಿ ಕಾರ್ಮಿಕ ವೆಂಕಪ್ಪ ಮೂಲ್ಯ ಕುಟುಂಬಕ್ಕೆ 50 ಸಾವಿರ ರೂ. ಧನಸಹಾಯ
Kulal news
1 Min Read