ಕಾಪು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳತ್ತೂರು ಕುಲಾಲ ಬಾಂಧವರಿಂದ ಶ್ರೀ ಸತ್ಯನಾರಾಯಣ ಪೂಜೆ,ಊರಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ವಿದ್ಯಾರ್ಥಿ ವೇತನದ ಸುಂದರ ಕಾರ್ಯಕ್ರಮವು ಕಳತ್ತೂರು ಕುಲಾಲ ಬಾಂಧವರ ಒಗ್ಗಟ್ಟಿನ ಮಾಸಿಕ ಸಭೆ ನಡೆಯುವ ಪುಂಚಲಕಾಡು ಸುದೀಪ್ ಕುಲಾಲ್ ನಿವಾಸದಲ್ಲಿ ಇತ್ತೀಚೆಗೆ ನಡೆಯಿತು.
ಬೆಳಿಗ್ಗೆ 10 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವು,ಶ್ರೀ ದೇವರ ಮಹಾ ಮಂಗಳಾರತಿ,ಪ್ರಸಾದ ವಿತರಣೆಯ ಬಳಿಕ ಸಭಾ ವೇದಿಕೆಯ ಕಾರ್ಯಕ್ರಮವು ಅರಂಭಗೊಂಡಿತು.
ಒಕ್ಕೂಟದ ಸದಸ್ಯೆ ಕಾಂಚನ ಕುಲಾಲ್ ರವರ ಪ್ರಾರ್ಥನೆಯೊಂದಿಗೆ ಅರಂಭಗೊಂಡ ಸಭಾ ಕಾರ್ಯಕ್ರಮವು ಊರಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ವಿಶಾಲ್, ವಿನ್ಯಾಸ್, ವೈಷ್ಣವಿ, ದೀಕ್ಷಿತಾ ಇವರಿಗೆ ಸನ್ಮಾನ ಹಾಗೂ ವಿದ್ಯಾರ್ಥಿ ವೇತನ ಕಾರ್ಯಕ್ರಮ ನಡೆಯಿತು.
ಒಕ್ಕೂಟದ ಅಧ್ಯಕ್ಷರು ಉದಯ ಕುಲಾಲ್ ,ಕಾರ್ಯದರ್ಶಿ ಸುದೀಪ್ ಕುಲಾಲ್ ,ಕೋಶಾಧಿಕಾರಿ ಸಂತೋಷ್ ಕುಲಾಲ್, ಒಕ್ಕೂಟದ ಗೌರವ ಅಧ್ಯಕ್ಷರು ಸುರೇಂದ್ರ ಕುಲಾಲ್ ಇರಂದಾಡಿ, ಸಂಜೀವ ಕುಲಾಲ್ ಮಲಂಗೋಳಿ, ಬಾಡುಮೂಲ್ಯ ಇರಂದಾಡಿ ಕುಲಾಲ ಸಮುದಾಯದ ಮಾಸಿಕ ಪತ್ರಿಕೆ ,ಸಮುದಾಯದ ಧ್ವನಿ ಬಿಂಬಧ್ವನಿ ಪತ್ರಿಕೆಯ ಪ್ರಧಾನ ಸಂಪಾದಕರು ಚಿದಂಬರ ಬೈಕಂಪಾಡಿ, ವಸಂತ್ ಕುಲಾಲ್ ಕಾರ್ಕಳ, ಕಾಪು ಕುಲಾಲ ಸಂಘದ ಅಧ್ಯಕ್ಷರು ಸಂದೀಪ್ ಬಂಗೇರ ಶಂಕರಪುರ, ಕಾರ್ಕಳ ಕುಲಾಲ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಸಂತೋಷ್ ಕುಲಾಲ್ ಪದವು ಇವರ ಉಪಸ್ಥಿತಿಯಲ್ಲಿ ಗೌರವಹಿಸಿ ಸನ್ಮಾನಿಸಲಾಯಿತು. ಶಂಕರ್ ಕುಲಾಲ್ ಬೆಳಪು ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.