
ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮಹಾರಾಷ್ಟ್ರ ಶಿಕ್ಷಣ ಮಂಡಳಿಯ 2018-19ನೇ ಸಾಲಿನ ಎಸ್ಎಸ್ಸಿ ಪರೀಕ್ಷೆಯಲ್ಲಿ ಭಾಂಡುಪ್ ಸೇಂಟ್ ಕ್ಸೆವಿಯರ್ ಹೈಸ್ಕೂಲ್ ನ ವಿದ್ಯಾರ್ಥಿನಿ ಖುಷಿ ಗಣೇಶ್ ಸಾಲ್ಯಾನ್ ಅವರು 85% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಭಾಂಡುಪ್ ನ ಗಣೇಶ್ ಸಾಲ್ಯಾನ್ ಮತ್ತು ಮಲ್ಲಿಕಾ ಸಾಲ್ಯಾನ್ ದಂಪತಿಯ ಸುಪುತ್ರಿ.