ಮಂಜೇಶ್ವರ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕಾಸರಗೋಡು ಜಿಲ್ಲಾ ಕುಲಾಲ ಸಂಘ (ರಿ.) ಇದರ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆ, ಸಾಧಕರಿಗೆ ಗೌರವಾರ್ಪಣೆ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮವು ಹೊಸಬೆಟ್ಟು ಕುಲಾಲ ಸಮಾಜ ಮಂದಿರದಲ್ಲಿ ಇತ್ತೀಚೆಗೆ ಜರುಗಿತು.
ಕಾರ್ಯಕ್ರಮದ ಅಂಗವಾಗಿ ಜರುಗಿದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ನ್ಯಾಯವಾದಿ ರವೀಂದ್ರ ಮನ್ನಿಪ್ಪಾಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ಸದಾನಂದ ಕುಮಾರ್, ಲಿಂಗಪ್ಪ, ಎಂ ಡಿ ಪ್ರವೀಣ್ ಕಡಂಬಾರ್, ವಸಂತ ಕುಮಾರ್, ಚಿದಂಬರ ಬೈಕಂಪಾಡಿ, ಕವಿತಾ, ಗಿರಿಜಾ ಮೊದಲಾದವರು ಭಾಗವಹಿಸಿ ಮಾತನಾಡಿದರು. ಇದೇ ಸಂದರ್ಭ ಸಂಘದ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಕಾಸರಗೋಡು ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ತೇಜಸ್ ಕುಳಬೈಲು, ಪ್ರಜ್ಞಾ ಕಣ್ವತೀರ್ಥ, ನಿಶ್ಮಿತಾ ಚೆನ್ನರಕಟ್ಟೆ, ಅಪೂರ್ವ ಪುತ್ತಿಗೆ, ಸಾಕ್ಷಿತಾ ಬದಿಯಡ್ಕ, ನಿಶ್ಚಿತಾ ಕಣ್ವತೀರ್ಥ, ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಭಾರತ ಸಂಸ್ಕೃತಿ ಪರಿಚಯ ಪರೀಕ್ಷೆಯಲ್ಲಿ ಬೆಳ್ಳಿ ಪದಕ ಪಡೆದ ಲಾವಣ್ಯ ಪೆರ್ಲ, ಇತರ ಸಾಧಕರಾದ ಶಂಕರ ಕುಂಜತ್ತೂರು, ಕೀರ್ತನಾ ಕೋರಿಕ್ಕಾರ್, ಕೇಶವ ಮಾಸ್ಟರ್ ನೂಜಿ, ಬಾಬು ಮೂಲ್ಯ ದೈಗೋಳಿ, ಶಿವಾನಂದ ಹೊಸಬೆಟ್ಟು ಅವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.