
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2018-19ನೇ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಸುರತ್ಕಲ್ ಸೂರಿಂಜೆ ಹಿದಾಯತ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಚೈತ್ರಾ ಅವರು 93.60% ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ದೇಲಂತಬೆಟ್ಟು ಕಯ್ಯೂರ್ ಕೋಡಿ ಪುಷ್ಪರಾಜ್ ಕುಲಾಲ್ ಮತ್ತು ಚಿತ್ರಾಕ್ಷಿ ದಂಪತಿಗಳ ಸುಪುತ್ರಿ.