
ಕಾಸರಗೋಡು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2018-19ನೇ ಸಾಲಿನ ಕೇರಳ ರಾಜ್ಯ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಕಾಸರಗೋಡು ಬಿಇಎಂ ಪ್ರೌಢಶಾಲೆಯ ವಿದ್ಯಾರ್ಥಿನಿ ಶಿವಾನಿ .ಕೆ ಅವರು 98.88% ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ನೆಲ್ಲಿಕುನ್ನು ನಿವಾಸಿ ಚಂದಪ್ಪ ಕೋರಿಕ್ಕಾರ್ ಮತ್ತು ಕೀರ್ತನಾ ಎಂ ಎಸ್ ದಂಪತಿಗಳ ಸುಪುತ್ರಿ.