
ಕಾಸರಗೋಡು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2018-19ನೇ ಸಾಲಿನ ಕೇರಳ ರಾಜ್ಯ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಕುರುಡಪದವು ಕುರಿಯ ವಿಠಲಶಾಸ್ತ್ರಿ ಮೆಮೋರಿಯಲ್ ಪ್ರೌಢಶಾಲೆಯ ವಿದ್ಯಾರ್ಥಿನಿ ಹರ್ಷಿತಾ ಅವರು 97.77% ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕುರುಡಪದವು ಚಂದ್ರಹಾಸ ಮತ್ತು ರೇವತಿ ದಂಪತಿಗಳ ಸುಪುತ್ರಿ.