ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ರಾಜ್ಯದ ಖ್ಯಾತ ಕುಟುಂಬ ವೈದ್ಯ, ವೈದ್ಯಕೀಯ ಶಿಕ್ಷಕ, ಸಂಘಟಕ, ಚಿಂತಕ ಮತ್ತು ಸಾಹಿತಿ ಆಗಿರುವ, ಶ್ರೀನಿವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ವೈದ್ಯಾಧಿಕಾರಿ ಹಾಗು ಪ್ರಾಧ್ಯಾಪಕರಾಗಿರುವ ಡಾ. ಅಣ್ಣಯ್ಯ ಕುಲಾಲ್ ಎಂ ಉಳ್ತೂರು ಇವರಿಗೆ ಅವರ ಸಮಾಜ ಮುಖೀಸೇವೆ , ಸಂಘಟನೆ ಮತ್ತು ಜನಜಾಗೃತಿಗಾಗಿ ಅಂತರ್ ರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಅವರು ಕಳೆದ ಎರಡು ದಶಕಗಳಿಂದ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ, ಕುಲಾಲ್ ಹೆಲ್ತ್ ಸೆಂಟರ್, ಸರ್ವಜ್ಞ ಸೆಕೆಂಡ್ ಒಪೀನಿಯನ್ ಸೆಂಟರ್, ಕನ್ನಡ ಕಟ್ಟೆ, ರಾಷ್ಟ್ರೀಯ ಪರಿಸರ ಸಂರಕ್ಷಣಾ ಸಮಿತಿ, ನೇತ್ರಾವತಿ ಹೋರಾಟ, ಕರವೇ ಕರಾವಳಿ, ಬೈರಾಡಿಕೆರೆ ಸಂರಕ್ಷಣಾ ಸಮಿತಿ, ಭಾರತೀಯ ವೈದ್ಯಕೀಯ ಸಂಘ, ಕುಟುಂಬ ವೈದ್ಯರ ಸಂಘಟನೆ, ಕರ್ನಾಟಕ ರಾಜ್ಯ ಕುಲಾಲ್ ಕುಂಬಾರ ಯುವವೇಧಿಕೆ, ಕರ್ನಾಟಕ ರಾಜ್ಯ ಕುಂಭ ವೈದ್ಯರ ಕೂಟ ಗಳ ಮೂಲಕ ಆರೋಗ್ಯ, ಶೈಕ್ಷಣಿಕ, ಸಾಮಾಜಿಕ ಸಾಂಸ್ಕೃತಿಕ ಜನ ಜಾಗೃತಿಯನ್ನ ಸಂಘಟನೆ, ಬರಹ, ಭಾಷಣ ಗಳ ಮೂಲಕ ಮಾಡಿ ನೆಲ-ಜಲ ,ನಾಡು -ನುಡಿ, ಪರಿಸರ -ಪೃಕೃತಿ ಉಳಿಸುವ ಹೋರಾಟಗಳಲ್ಲಿ ತೊಡಗಿಸಿ ಕೊಂಡವರು, ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಘಟಕದ ನಿಯೋಜಿತ ಅಧ್ಯಕ್ಷರೂ, ಐಎಂಎ ರಾಜ್ಯ ಘಟಕದ ವಕ್ತಾರ, ಬಿಜೆಪಿ ಆರೋಗ್ಯ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕರಾಗಿ ಸಮಾಜ ಮುಖೀ ಸೇವೆ ಯ ಜೊತೆಗೆ ಐಎಂಎ ರಾಜ್ಯ ಶಾಖೆ ಮತ್ತು ಮಂಗಳೂರು ಶಾಖೆ ಗಳು ಜಂಟಿಯಾಗಿ ಆಯೋಜಿಸುತ್ತಿರುವ ಚಾರಿತ್ರಿಕ ಚೊಚ್ಚಲ ಕನ್ನಡ ವೈದ್ಯ ಬರಹಗಾರರ ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಯಾಗಿ ದುಡಿಯುತ್ತಾ ಕನ್ನಡ ನಾಡು ನುಡಿಗಾಗಿ ಹೆಣಗುತ್ತಿರುವ ಇವರು ಮೇ 30 ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಜರುಗಲಿರುವ ಸಮಾರಂಭದಲ್ಲಿ ನಾಡಿನ ಶ್ರೇಷ್ಠ ಪ್ರಶಸ್ತಿ ಗಳಲ್ಲಿ ಒಂದಾದ ಆರ್ಯಭಟ ಪ್ರಶಸ್ತಿಯನ್ನ ಸ್ವೀಕರಿಸಲಿದ್ದಾರೆ.