ಕಾಪು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಹುಟ್ಟಿನಿಂದಲೇ ಗುದದ್ವಾರವಿಲ್ಲದೇ ಜನಿಸಿದ ಬಡಕುಟುಂಬದ ಮಗುವಿನ ವೈದ್ಯಕೀಯ ಚಿಕಿತ್ಸೆಗೆ ಕಾಪು ಕುಲಾಲ ಯುವ ವೇದಿಕೆ ಹಾಗೂ ಕಾಪು ಕುಲಾಲ ಸಂಘದ ವತಿಯಿಂದ 29,900 ರೂ. ಧನಸಹಾಯ ನೀಡಲಾಯಿತು.
ಕಾಪು ಕುತ್ಯಾರಿನ ಇರಂದಾಡಿಯಲ್ಲಿ ನೆಲೆಸಿರುವ ರವಿ ಕುಲಾಲ್ – ಶೋಭಾ ಕುಲಾಲ್ ದಂಪತಿಯ 9 ತಿಂಗಳ ಲಕ್ಷ್ಯ ಎಂಬ ಹೆಣ್ಣು ಮಗು ಗುದದ್ವಾರ ಇಲ್ಲದೇ ಜನಿಸಿದೆ. ಅಪರೂಪದ ಪ್ರಕರಣವನ್ನು ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸುವಂತೆ ವೈದ್ಯರು ತಿಳಿಸಿದ್ದರು. ಅದರಂತೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಇದನ್ನು ಶಸ್ತ್ರಕ್ರಿಯೆ ಮೂಲಕ ಸರಿಪಡಿಸುವ ಭರವಸೆ ನೀಡಲಾಗಿತ್ತು. ಅದರಂತೆ ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಮೊದಲು ಮೂತ್ರಕೋಶದ ಬಳಿ ರಂಧ್ರ ಮಾಡಲಾಯಿತು. ಅದು ಫಲಕಾರಿಯಾಗಲಿಲ್ಲ. ಬಳಿಕ ಹೊಟ್ಟೆ ಭಾಗದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಅದೂ ಯಶಸ್ವಿಯಾಗದೇ ರವಿ ಕುಟುಂಬ ಬಹಳಷ್ಟು ತೊಂದರೆ, ನೋವು ಅನುಭವಿಸಿದೆ.
ಇದೀಗ ಇನ್ನೊಂದು ಶಸ್ತ್ರಚಿಕಿತ್ಸೆ ನಡೆಸಬೇಕಾಗಿದ್ದು, ಅದಕ್ಕಾಗಿ ಮಗುವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮುಂದಿನ ಚಿಕಿತ್ಸೆಗೆ ಒಂದು ಲಕ್ಷಕ್ಕೂ ಅಧಿಕ ರೂಪಾಯಿ ವೆಚ್ಚವಾಗಬಹುದೆಂದು ವೈದ್ಯರು ತಿಳಿಸಿದ್ದು, ಬಡ ಕುಟುಂಬಕ್ಕೆ ಇಷ್ಟು ಹಣ ಹೊಂದಿಸುವ ಶಕ್ತಿ ಇಲ್ಲ. ಮೇಸ್ತ್ರಿ ಕೆಲಸ ಮಾಡುವ ರವಿ ಕುಲಾಲ್, ಬೀಡಿ ಕಾರ್ಮಿಕರಾಗಿರುವ ಶೋಭಾ ಅವರ ಮಗುವಿನ ಚಿಕಿತ್ಸೆಗೆ ದಾನಿಗಳಿಂದ ಒಟ್ಟಾದ ರೂ 29,900 ನ್ನು ಮಗುವಿನ ಪೋಷಕರಿಗೆ ಇತ್ತೀಚೆಗೆ ಹಸ್ತಾಂತರಿಸಲಾಯಿತು.
ಹಣ ಹಸ್ತಾಂತರ ಸಂದರ್ಭ ಕಾಪು ಕುಲಾಲ ಯುವ ವೇದಿಕೆಯ ಅಧ್ಯಕ್ಷರು ಉದಯ ಕುಲಾಲ್ ಕಳತ್ತೂರು, ವಕೀಲರು ಸುನಿಲ್ ಎಸ್ ಮೂಲ್ಯ, ಶಂಕರ್ ಕುಲಾಲ್ ಇರಂದಾಡಿ,
ಕಾಪು ಕುಲಾಲ ಸಂಘದ ಅಧ್ಯಕ್ಷರು ರಾಜೇಶ್ ಕುಲಾಲ್ ಬೊಬ್ಬೆಟ್ಟು,ಉಪಾಧ್ಯಕ್ಷರು ಸಂದೀಪ್ ಬಂಗೇರ ಶಂಕರಪುರ,ಪ್ರಧಾನ ಕಾರ್ಯದರ್ಶಿ ಸುರೇಶ್ ಕುಲಾಲ್ ಕೆಮುಂಡೇಲು , ಸುರೇಶ್ ಡಿ ಕುಲಾಲ್ ಇನ್ನ, ಯೋಗೀಶ್ ಕುಲಾಲ್ ಉಳ್ಳೂರು,ರವಿರಾಜ್ ಆಚಾರ್ಯ ಕುಕ್ಕುಂಜ, ಶಶಿಧರ್ ಕುಲಾಲ್, ದಿನೇಶ್ ಕುಲಾಲ್ ಮಲಂಗೋಳಿ ಉಪಸ್ಥಿತರಿದ್ದರು..
ಮಗುವಿಗೆ ನೆರವು ನೀಡುವವರು ಕೆಳಗಿನ ಖಾತೆಗೆ ಹಣ ವರ್ಗಾಯಿಸಿ ಸಹಕರಿಸಲು ವಿನಂತಿ
ವಿಜಯ ಬ್ಯಾಂಕ್ ಕಳತ್ತೂರು
ಅಕೌಂಟ್ ನಂಬರ್–110401010003634
IFSC CODE- VIJBOOO21O4
Mobil number -9632298741