ಮುಂಬಯಿ : ಕುಲಾಲ ಸಂಘ ಮುಂಬಯಿ ಇದರ ನವಿಮುಂಬಯಿ ಸಮಿತಿಯ 11ನೇ ವಾರ್ಷಿಕ ಸ್ನೇಹ ಮಿಲನ ಕಾರ್ಯಕ್ರಮ ನವಿಮುಂಬಯಿ ವಾಶಿಯ ಸೆಕ್ಟರ್ 9 ಎ ಯ ನವಿಮುಂಬಯಿ ಕನ್ನಡ ಸಂಘ ದ ಸಭಾಗೃಹದಲ್ಲಿ ಇತ್ತೀಚೆಗೆ ಜರುಗಿತು.
ಸಮಾರಂಭವನ್ನು ಸಂಘದ ಅಧ್ಯಕ್ಷರಾದ ಗಿರೀಶ್ ಸಾಲ್ಯಾನ್ ಅವರು ದೀಪ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು `ನಮ್ಮ ಪ್ರತಿಯೊಂದಿಗೆ ಸಮಾಜದ ಸಂಘಟನೆಯ ಸೇವಾ ಕಾರ್ಯದಲ್ಲಿ ನಮ್ಮ ಪಾಲಿರಬೇಕು. ಮಕ್ಕಳಿಗೆ ಶಿಕ್ಷಣದೊಂದಿಗೆ ಸಾಂಸಾರಿಕ ಜೀವನ ನಡೆಸುವ ಪದ್ದತಿಯನ್ನು ಬೆಳೆಸಬೇಕು. ಹಾಗಾದಲ್ಲಿ ಮುಂದೆ ಕುಟುಂಬದ ಬಗ್ಗೆ ಮಕ್ಕಳಿಗೆ ಗೌರವ ಬೆಳೆಯುತ್ತದೆ. ಈ ಸ್ಥಳೀಯ ಸಮಿತಿ ಉತ್ತಮ ಕಾರ್ಯಗಳ ಮೂಲಕ ಸಮಾಜ ಬಾಂಧವರನ್ನು ಜಾಗೃತಿಗೊಳಿಸಿದೆ. ಮಕ್ಕಳ ಪ್ರತಿಭೆಗೆ ಸೂಕ್ತ ಅವಕಾಶವನ್ನು ನೀಡಬೇಕು ಈ ಉದ್ದೇಶಗಳಿಂದ ಸಂಘದ ಪ್ರತಿಯೊಂದು ಸ್ಥಳೀಯ ಸಮಿತಿಯು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರಿಂದ ಹೆಚ್ಚು ಹೆಚ್ಚು ಪ್ರತಿಭೆಗಳು ಅನಾವರಣಗೊಳ್ಳಬೇಕು. ಸಮಾಜದ ಸಂಘಟನೆಯಲ್ಲಿ ಅಭಿಮಾನವಿರಲಿ’ ಎಂದರು.
ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯದರ್ಶಿ ದೇವದಾಸ ಎಲ್. ಕುಲಾಲ್ ಮಾತನಾಡುತ್ತಾ `ಜ್ಯೋತಿ ಕ್ರೆಡಿಟ್ ಸೊಸೈಟಿಯ ನವಿ ಮುಂಬಯ ಶಾಖೆಯು ಸಮಾಜ ಬಾಂಧವರಿಗೆ ಹೆಚ್ಚಿನ ಸೌಲಭ್ಯ ನೀಡುವ ಕೆಲಸವನ್ನು ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಎರಡು ಶಾಖೆಗಳನ್ನು ಪೂನಾ ಮತ್ತು ನಾಲಾಸೋಪಾರದಲ್ಲಿ ಪ್ರಾರಂಭಿಸಲು ಸಿದ್ದತೆ ನಡೆದಿದೆ. ಇದಕ್ಕೆ ತಮ್ಮೆಲ್ಲರ ಸಹಕಾರದ ಅಗತ್ಯವಿದೆ’ ಎಂದರು.
ಸಮಾರಂಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಡಿ. ಐ. ಮೂಲ್ಯ , ಗೌ. ಕೋಶಾಧಿಕಾರಿ ಜಯ ಅಂಚನ್ , ಮಂಗಳೂರು ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ ಬಂಗೇರ ಹಾಗೂ ಮಹಿಳಾ ವಿಭಾಗದ ಕಾರ್ಯದರ್ಶಿ ಸವಿನಾ ಕುಲಾಲ್, ವಿವಿಧ ಉಪಸಮಿತಿಯ ಪದಾಧಿಕಾರಿಗಳಾದ ಕೃಷ್ಣ ಮೂಲ್ಯ, ಡಾ. ನಿಖೇಶ್ ಮೂಲ್ಯ, ಮೋಹನ್ ಬಂಜನ್, ನಾಲಾಸೋಪಾರ, ಸ್ಥಳೀಯ ಸಮಿತಿಯ ಕಾರ್ಯಧ್ಯಕ್ಷ ರಘು ಮೂಲ್ಯ, ಉಪ ಕಾರ್ಯಾಧ್ಯಕ್ಷ ಸುರೇಶ್ ಕೆ. ಕುಲಾಲ್, ಕಾರ್ಯದರ್ಶಿ ದಯಾನಂದ ಕುಲಾಲ್, ಕೋಶಾಧಿಕಾರಿ ಹರೀಶ್ಚಂದ್ರ ಮೂಲ್ಯ, ಜತೆ ಕಾರ್ಯದರ್ಶಿ ದಯಾನಂದ ಕೆ ಮೂಲ್ಯ, ಜೊತೆ ಕೋಶಾಧಿಕಾರಿ ಕೃಷ್ಣ ಸಿ. ಕುಕ್ಯಾನ್, ಕಾರ್ಯಾಧ್ಯಕ್ಷೆ ಮಲ್ಲಿಕಾ ಡಿ. ಕುಲಾಲ್, ಉಪ ಕಾರ್ಯಾಧ್ಯಕ್ಷೆ ಪ್ರೇಮಾ ಎಲ್. ಮೂಲ್ಯ, ಕಾರ್ಯದರ್ಶಿ ಮಾಲತಿ ಅಂಚನ್, ಜತೆ ಕಾರ್ಯದರ್ಶಿ ಉಷಾ ಅರ್ ಮೂಲ್ಯ, ಕೋಶಾಧಿಕಾರಿ ಶಶಿಕಲಾ ಎಸ್ ಮೂಲ್ಯ, ಜತೆ ಕೋಶಾಧಿಕಾರಿ ಬೇಬಿ ವಿ ಬಂಗೇರ ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಸುಂದರ್ ಹಾಂಡ, ಮತ್ತು ಸುಜಾತ ಎಸ್. ಹಾಂಡ ದಂಪತಿಯನ್ನು ಸನ್ಮಾನಿಸಿದರೆ ಪ್ರತಿಭಾವಂತ ವಿದ್ಯಾರ್ಥಿನಿ ಸೃತಿ ಜಯಾ ಅಂಚನ್ ಅವರನ್ನು ಗೌರವಿಸಲಾಯಿತು. ರಘು ಮೂಲ್ಯ ಪಿ ಸ್ವಾಗತಿಸಿದರು. ರಘು ಬಿ. ಮೂಲ್ಯ ಮತ್ತು ಶಶಿಕುಮಾರ್ ವಿ. ಕುಲಾಲ್, ಮಾಲತಿ ಜೆ. ಅಂಚನ್ ಕಾರ್ಯಕ್ರಮವನ್ನು ನಿರೂಪಿಸಿದರು. ವೇದಿಕೆಯ ಗಣ್ಯರಿಗೆ ಡಾ. ಹರೀಶ್ ಬಿ. ಸಾಲ್ಯಾನ್, ಪಿ ಶೇಖರ ಮೂಲ್ಯ ಮತ್ತಿತರರು ಗೌರವಿಸಿದರು. ಆರ್ಥಿಕವಾಗಿ ಹಿಂದುಳಿದ ಸ್ಠಳೀಯ ವಿದ್ಯಾರ್ಥಿಗಳಿಗೆ ಸುಮಾರು 45 ಸಾವಿರ ರೂಪಾಯಿಯನ್ನು ದಾನಿಗಳ ಸಹಾಯದಿಂದ ನೀಡಲಾಯಿತು. ಮಧ್ಯಾಹ್ನ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಮನೋರಂಜನೆಯ ಅಂಗವಾಗಿ ಛದ್ಮವೇಶ, ಹಾಡು, ನೃತ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲದೆ ಶಶಿಕುಮಾರ್ ಕುಲಾಲ್ ರಚಿಸಿ ನಿರ್ದೇಶಿಸಿದ ’ಪನಿ ಪನಿ…..ತೆಲಿಪುನೆ….’ ತುಳು ನಾಟಕ ಯಶಸ್ವಿಯಾಗಿ ಪ್ರದರ್ಶನಗೊಂಡಿತು.