
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2018-19ನೇ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ತಾವರ ಸರೋಜಿನಿ ಮಧುಸೂಧನ್ ಖುಶೆ ಪ್ರೌಢಶಾಲೆಯ ವಿದ್ಯಾರ್ಥಿನಿ ಖುಷಿ. ಜೆ. ಅತ್ತಾವರ ಅವರು 96% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮಂಗಳಾದೇವಿ ಮಂಗಳಾನಗರದ ಜಗದೀಪ್ ಮತ್ತು ಶೈಲಜಾ ಬಿ ದಂಪತಿಗಳ ಸುಪುತ್ರಿ.