ಬಂಟ್ವಾಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2018-19ನೇ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಕಡೇಶಿವಾಲಯ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಯಶಸ್ವಿ ಅವರು 92.16% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕೆದಿಲ ಕುದುಮಾನು ತನಿಯಪ್ಪ ಮೂಲ್ಯ ಮತ್ತು ಯಶೋಧಾ ದಂಪತಿಗಳ ಸುಪುತ್ರಿ. ಶ್ರವಣ ಶಕ್ತಿ ಕೊರತೆ ಇರುವ, ಮಾತನಾಡಲು ಕಷ್ಟಪಡುವ ಯಶಸ್ವಿ ಅದ್ಭುತ ಏಕಾಗ್ರತೆ ಹೊಂದಿದ್ದಾಳೆ. ಹುಟ್ಟಾ ಶ್ರವಣದೋಷವಿದ್ದ ಈಕೆಯನ್ನು ಹೆತ್ತವರು ವಿಶೇಷ ಮುತುವರ್ಜಿ ವಹಿಸಿ ಓದು ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿದ್ದಾರೆ. ಚೆಸ್ನಲ್ಲಿ ಈಕೆಗೆ ಇದ್ದ ವಿಶೇಷ ಆಸಕ್ತಿ ಗಮನಿಸಿದ ಹೆತ್ತವರು ಪುತ್ತೂರಿನಲ್ಲಿ ಚೆಸ್ ತರಬೇತಿ ನೀಡುತ್ತಿದ್ದು, 3 ವರ್ಷಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅದ್ಭುತ ಸಾಧನೆ ಮಾಡಿದ್ದಾಳೆ.
ಎಸ್ಸೆಸೆಲ್ಸಿ ಪರೀಕ್ಷೆ : ಯಶಸ್ವಿಗೆ 92.16% ಅಂಕ
Students corner
1 Min Read


