ಮಂಗಳೂರು(ಮಾ.೨೪, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯ ಕುಲಾಲ ಯುವವೇದಿಕೆಯ ದಶಮಾನೋತ್ಸವ ಅಂಗವಾಗಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳ ಪೂರ್ವಭಾವಿ ಸಿದ್ಧತಾ ಸಭೆಯು ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಸಭಾಭವನದಲ್ಲಿ ಜರುಗಿತು.
ಕುಂಬಾರ ಸಮುದಾಯದ ಹಿರಿಯ ನಾಯಕಿ ಶ್ರೀಮತಿ ಮುತ್ತಮ್ಮ ಮಡಿಕೇರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯುವ ವೇದಿಕೆ ಸ್ಥಾಪಕ ಅಧ್ಯಕ್ಷರಾದ ಡಾ ಅಣ್ಣಯ್ಯ ಕುಲಾಲ್ ದೀಪಬೆಳಗಿಸಿ ಕಾರ್ಯಕ್ರಮವನ್ನ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, 1926ರಲ್ಲಿ ಆರಂಭವಾದ ದಕ ಜಿಲ್ಲಾ ಮೂಲ್ಯರ ಯಾನೆ ಕುಲಾಲ ಮಾತೃ ಸಂಘವು ನೂರು ವರ್ಷಗಳನ್ನು ಪೂರೈಸುವ ಹೊತ್ತಿಗೆ ಕರ್ನಾಟಕ ರಾಜ್ಯ ಕುಲಾಲ ಯುವ ವೇದಿಕೆಯ ನೂರು ಘಟಕಗಳನ್ನು ಆರಂಭ ಮಾಡಿ ಮಾತೃ ಸಂಘಕ್ಕೆ ಸಂಘಟನಾ ಶಕ್ತಿ ತುಂಬುವ ಗುರಿ ನಮ್ಮದಾಗಿದೆ. ದಶಮಾನೋತ್ಸವದ ಅಂಗವಾಗಿ ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗುವುದು ಎಂದರು.
ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಮುತ್ತಮ್ಮ ಅವರು, ಕುಂಬಾರ ಸಮುದಾಯದ 25 ಲಕ್ಷ ಕುಂಬಾರರನ್ನಲ್ಲದೆ, ಇತರ ಸರ್ವ ಜನರನ್ನೂ ಪ್ರತಿನಿಧಿಸಬಲ್ಲ, ವೈದ್ಯ, ಶಿಕ್ಷಕ ಹಾಗು ಸಮಾಜಮುಖೀ ಚಿಂತಕ ಡಾ ಅಣ್ಣಯ್ಯ ಕುಲಾಲ್ ಇವರನ್ನ ರಾಜ್ಯಸಭೆ ಅಥವಾ ವಿಧಾನ ಪರಿಷತ್ ಗೆ ಆರಿಸಿ ಕುಂಬಾರರಿಗೆ ಸಾಮಾಜಿಕ ಹಾಗು ರಾಜಕೀಯ ನ್ಯಾಯ ಕೊಡಲು ಯತ್ನಿಸಬೇಕೆಂದು ಹೇಳಿದರು.
ಯುವ ವೇದಿಕೆಯ ಹಿರಿಯ ನಾಯಕರಾದ ಸದಾನಂದ ನಾವರ, ಅನಿಲ್ ದಾಸ್, ಮಹಾಬಲ ಮಾಸ್ಟರ್, ಜೈರಾಜ್ ಪ್ರಕಾಶ್, ಜಯೇಶ್ ಗೋವಿಂದ್, ಶಂಕರ್ ಕುಲಾಲ್, ಸತೀಶ್ ಕುಲಾಲ್, ಸುಜೀರ್ ಕುಡುಪು, ಅಶೋಕ್ ಕುಲಾಲ್ , ಕುಶಾಲಪ್ಪ ಕುಲಾಲ್, ಸುಧಾಕರ್ ಕುಲಾಲ್ , ಪ್ರವೀಣ್ ಬಸ್ತಿ , ಪ್ರಭಾಕರ್ ಕುಲಾಲ್, ಸುಕುಮಾರ್ ಬಂಟ್ವಾಳ್ ಹಾಗೂ ಅವಿಭಜಿತ ದಕ ಜಿಲ್ಲೆಯ ಎಲ್ಲಾ ವಿಧಾನ ಸಭಾ ಘಟಕಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು, ಯುವ ನಾಯಕ ಹರೀಶ್ ಕಾರಿಂಜ ಸ್ವಾಗತಿಸಿದರು. ಶೇಷಪ್ಪ ಮಾಸ್ತರ್ ವಂದಿಸಿದರು, ಕಲಾವಿದ ಹೆಚ್ ಕೆ ನಯನಾಡ್ ಕಾರ್ಯಕ್ರಮ ನಿರ್ವಹಿಸಿದರು.
ಯುವವೇದಿಕೆ ದಶಮಾನೋತ್ಸವದ ಅಂಗವಾಗಿ ನಡೆಸಲು ಉದ್ದೇಶಿಸಿರುವ ಪ್ರಮುಖ ಕಾರ್ಯಕ್ರಮಗಳು
* ಮೂಡಬಿದ್ರೆಯ ಆಳ್ವಾಸ್ ಕಾಲೇಜ್ ನಲ್ಲಿ ಯುವವೇದಿಕೆಯ ರಾಜ್ಯಮಟ್ಟದ ಸಮ್ಮೇಳನ
* ಮಂಗಳೂರು ಮನಪಾ ವಾರ್ಡ್ ಮಟ್ಟದ ಪುರುಷ ಮತ್ತು ಮಹಿಳಾ ಹಗ್ಗ ಜಗ್ಗಾಟ ಸ್ಪರ್ಧೆ
* ಮಾತೃ ಸಂಘದ ಶತಮಾನೋತ್ಸವಕ್ಕೆ ಯುವವೇದಿಕೆ ವತಿಯಿಂದ ನೂರು ಯುವ ಘಟಕಗಳ ಸ್ಥಾಪನಾ ಗುರಿ
* ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ ರಚನೆ
* ಕುಂಬಾರರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಕುಂಭ ನಿಗಮ ನೀಡುವಂತೆ ಒತ್ತಾಯಿಸಿ ಕಾರ್ಡ್ ಚಳುವಳಿ
* ಕುಂಬಾರರಿಗೆ ರಾಜ್ಯ ಸಭೆ ಅಥವಾ ವಿಧಾನ ಪರಿಷತ್ ಸ್ಥಾನ ನೀಡುವಂತೆ ರಾಜಕೀಯ ಪಕ್ಷಗಳಿಗೆ ಒತ್ತಾಯ