ಕುಂದಾಪುರ(ಮಾ.೦೧, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಜನಪದ ಹಾಡುಗಾರರಾಗಿರುವ ಶ್ರೀಮತಿ ಚಂದು ಕುಲಾಲ್ ಮೆಟ್ಟಿನಹೊಳೆ ಇವರನ್ನು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಇತ್ತೀಚಿಗೆ ಕಂಬದಕೋಣೆ ಸಂವೇದನ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ಬೈಂದೂರು ತಾಲೂಕು ಘಟಕದ ಚೊಚ್ಚಲ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಗೌರವ ಸ್ವೀಕರಿಸಿದರು. ಕನ್ನಡ ನಾಡುನುಡಿ, ಸಾಹಿತ್ಯ, ಸಂಸ್ಕೃತಿ, ಜಾನಪದವನ್ನು ಉಳಿಸಿ ಬೆಳೆಸುವಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ ಹಲವರನ್ನು ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು. ಚಂದು ಕುಲಾಲ್ ಅವರು ಬಾಲ್ಯದಿಂದ ಕರಗತ ಮಾಡಿಕೊಂಡ ಜನಪದ ಹಾಡುಗಳನ್ನು, ಭಜನೆ ಪದಗಳನ್ನು ಸುಶ್ರಾವ್ಯವಾಗಿ ಹಾಡಬಲ್ಲವರಾಗಿದ್ದಾರೆ.