ಕಾಸರಗೋಡು(ಫೆ.೨೭, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕೇರಳ ಕಂದಾಯ ಇಲಾಖೆಯಿಂದ ನೀಡಲಾಗುವ ಅತ್ಯುತ್ತಮ ಗ್ರಾಮಾಧಿಕಾರಿ ಪುರಸ್ಕಾರಕ್ಕೆ ಶ್ರೀಮತಿ ಕೀರ್ತನಾ ಅವರು ಆಯ್ಕೆಯಾಗಿದ್ದಾರೆ.
ಇವರು ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕಿನ ಬಂಬ್ರಾಣ ಗ್ರಾಮ ಕಚೇರಿಯ ಗ್ರಾಮಾಧಿಕಾರಿಯಾಗಿದ್ದಾರೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕೇರಳ ಕಂದಾಯ ಮಂತ್ರಿ ಇ ಚಂದ್ರಶೇಖರ್ ಅವರಿಂದ ಈ ಪುರಸ್ಕಾರವನ್ನು ಕೀರ್ತನಾ ಸ್ವೀಕರಿಸಿದರು.ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಗಳ ಮಧ್ಯೆ, ಮಲಯಾಳಂ ಭಾಷಿಗರನ್ನೂ ಮೀರಿಸಿ ಈ ಪುರಸ್ಕಾರ ಪಡೆದ ಕೀರ್ತನಾ ಅವರ ಶ್ರಮಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಕುಲಾಲ ಸಮುದಾಯದವರಾದ ಕೀರ್ತನಾ ಅವರು ಬಿಎಸ್ಸಿ, ಬಿಎಡ್ ಪದವೀಧರರು. ಕಾಸರಗೋಡು ನಿವಾಸಿ ಈಶ್ವರ್ ಹಾಗು ಶಾರದಾ ದಂಪತಿಯ ಸುಪುತ್ರಿಯಾಗಿದ್ದು, ಕೆ. ಚಂದಪ್ಪ ಅವರ ಪತ್ನಿ. ಈ ಹಿಂದೆ ಕಾಸರಗೋಡು ತಾಲೂಕು ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸಿ, ಬಳಿಕ ಗ್ರಾಮಾಧಿಕಾರಿಯಾಗಿ ಭಡ್ತಿ ಪಡೆದಿದ್ದರು. ವಿಶೇಷವೆಂದರೆ ಇದೇ ಪುರಸ್ಕಾರಕ್ಕೆ ಕಳೆದ ವರ್ಷ ಕೊಡ್ಲಮೊಗರು ಗ್ರಾಮಾಧಿಕಾರಿ, ಕುಲಾಲ ಸಮುದಾಯದ ಶಂಕರ ಕುಂಜತ್ತೂರು ಆಯ್ಕೆಯಾಗಿದ್ದರು.