ಕಾರ್ಕಳ(ಫೆ.೨೫, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಅಪಘಾತದಲ್ಲಿ ಗಂಭೀರ ಏಟು ತಗುಲಿ ಕಾಲು ಕಳೆದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನಿಗೆ `ಕುಲಾಲ ಚಾವಡಿ’ ಸಹೃದಯರ ವಾಟ್ಸಾಪ್ ಗ್ರೂಪಿನ ವತಿಯಿಂದ ಸಂಗ್ರಹಿಸಲಾದ ಧನಸಹಾಯವನ್ನು ನೀಡಲಾಯಿತು.
ನೀರೆ ಬೈಲೂರಿನ ಕೂಲಿ ಕಾರ್ಮಿಕ ರಾಮ ಮೂಲ್ಯ-ಬೇಬಿ ದಂಪತಿಯ ಒಬ್ಬನೇ ಮಗ ಸುನಿಲ್ ಅಪಘಾತದಲ್ಲಿ ತನ್ನ ಕಾಲು ಕಳೆದುಕೊಂಡ ದುರ್ದೈವಿಯಾಗಿದ್ದು, ಚಿಕಿತ್ಸೆಗೆ ನಾಲ್ಕು ಲಕ್ಷಕ್ಕೂ ಅಧಿಕ ಹಣದ ಅವಶ್ಯಕತೆ ಇತ್ತು. ಚಿಕಿತ್ಸೆಗೆ ಹಣ ಹೊಂದಿಸಲಾಗದೇ ಕಂಗಲಾಗಿದ್ದ ಇವರ ಸ್ಥಿತಿಯನ್ನರಿತ `ಕುಲಾಲ ಚಾವಡಿ’ಯ ಮಿತ್ರರು ಸೇರಿ ಒಟ್ಟು 60 ಸಾವಿರ ರೂ. ಸಂಗ್ರಹಿಸಿ ಸುನಿಲ್ ಅವರ ಮನೆಯಲ್ಲಿ ಹೆತ್ತವರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಸತೀಶ್ ಕಜ್ಜೋಡಿ, ಹೇಮಂತ್ ಕಿನ್ನಿಗೋಳಿ, ಹೃದಯ್ ಕುಲಾಲ್, ವಸಂತ್ ಎರ್ಲಪಾಡಿ, ಸುರೇಶ್ ಕುಲಾಲ್ ರಂಗನಪಲ್ಕೆ, ನರೇಶ್ ಕೆ.ಟಿ, ಸಂದೀಪ್ ಬಂಗೇರ ಪಳ್ಳಿ, ವಿಜೇಶ್ ಕುಲಾಲ್, ಅಶೋಕ್ ಕುಲಾಲ್ ,ರಂಜಿತ್ ಕುಲಾಲ್ ಮೂಡಬಿದಿರೆ ,ಶೇಖರ ಕುಲಾಲ್ ಬೈಲೂರು, ಸದಾನಂದ ಕುಲಾಲ್ ನೀರೆ, ಜಯ ಕುಲಾಲ್ ನೀರೆ, ದಿಲೀಪ್ ಕುಲಾಲ್ ಪಳ್ಳಿ, ವಿಶ್ವನಾಥ ಕುಲಾಲ್ ನಿಟ್ಟೆ, ಸುರೇಶ್ ಕುಲಾಲ್ ನೀರೆ ಮೊದಲಾದವರು ಇದ್ದರು.
ಮೊಬೈಲ್ ಶಾಪ್ ನಲ್ಲಿ ದಿನದ 8 ಗಂಟೆಯ ದುಡಿಮೆಯ ನಂತರ ಜೋಮಾಟೋ ಆಹಾರ ಸರಬರಾಜು ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ರಾತ್ರಿ ಹನ್ನೊಂದರವರೆಗೆ ದುಡಿಯುತಿದ್ದ ಸುನಿಲ್ ಆ ರಾತ್ರಿ ತನ್ನ ಕೆಲಸ ಮುಗಿಸಿ ಬೈಕಲ್ಲಿ ಮನೆಗೆ ಮರಳುವ ವೇಳೆ ಉದ್ಯಾವರದ ಬಳಿ ಕಾರೊಂದು ಹಿಂಬದಿಯಿಂದ ಗುದ್ದಿ ಪರಾರಿಯಾಗಿತ್ತು. ಅಪಘಾತದ ತೀವ್ರತೆಗೆ ಸುನಿಲ್ ಮೂತ್ರಕೋಶಗ ರಕ್ತ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು ಡಯಾಲಿಸಿಸ್ ನಡೆಸುತ್ತಿದೆ. ಅವರ ಒಂದು ಕಾಲು ಜಜ್ಜಲ್ಪಟ್ಟು ಚಿಕಿತ್ಸೆಯಿಂದ ಸರಿಪಡಿಲಾಗದೆ ಶರೀರದಿಂದ ಕಾಲನ್ನೇ ಬೇರ್ಪಡಿಸಬೇಕಾಯಿತು. ಪ್ರಾಣ ಉಳಿಸುವ ಏಕೈಕ ಕಾರಣಕ್ಕೆ ವೈದ್ಯರು ತೆಗೆದುಕೊಂಡು ಈ ಕಠಿಣ ನಿರ್ಧಾರ ಆ ಯುವಕನ ಭವಿಷ್ಯವನ್ನೇ ಅಂಧಕಾರಕ್ಕೆ ತಳ್ಳಿದೆ. ಸುನಿಲ್ ನ ಹೆಚ್ಚಿನ ಚಿಕಿತ್ಸೆಗೆ ನಾಲ್ಕು ಲಕ್ಷಕ್ಕೂ ಅಧಿಕ ಹಣದ ಅವಶ್ಯಕತೆ ಇದ್ದು, ದಾನಿಗಳು ಇವರ ನೋವಿಗೆ ಸ್ಪಂದಿಸಬೇಕಾಗಿದೆ.
Name : sunil
A/c No.4212500100810901
Bank name: Karnataka bank
Branch:Kattingeri mudubelle
IFSC Code:KARB0000421
MOBILE NO-9900712204(ಸುಂದರ ಕುಲಾಲ್)
9945491477(ಶೇಖರ ಕುಲಾಲ್ ಬೈಲೂರು)