ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಪೊಳಲಿ ಶ್ರೀದುರ್ಗಾ ರಾಜರಾಜೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಹಲಾವಾರು ಸಮಾಜದ ಸೇವೆಯೊಂದಿಗೆ ಇಲ್ಲಿಯ ಕುಲಾಲ ಸಮಾಜ ಬಾಂಧವರ ವತಿಯಿಂದ ಶ್ರೀಮಹಾಗಣಪತಿ ಹಾಗೂ ಶ್ರೀ ಭದ್ರಕಾಳಿ ದೇವರ ದಾರಂದ ಮತ್ತು ಬಾಗಿಲುಗಳಿಗೆ ರಜತ ಹೊದಿಕೆಯನ್ನು ಸುಮಾರು 27 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ರಜತಹೊದಿಕೆಯ ಸಮರ್ಪಣಾ ಸಮಾರಂಭವು ಫೆ.17 ರಂದು ಭಾನುವಾರ ನಡೆಯಿತು.
ಕುಲಾಲ ಸಮಾಜ ಬಾಂಧವರನ್ನೊಳಗೊಂಡ ಶ್ರೀ ರಾಜರಾಜೇಶ್ವರೀ ಸೇವಾ ಸಮಿತಿ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಮಹಾಲಕ್ಷ್ಮೀ ಕ್ಷೇತ್ರ ಶ್ರೀ ಧಾಮ ಮಾಣಿಲದ ಪೂಜ್ಯ ಶ್ರೀ ಮೋಹನದಾಸ ಸ್ವಾಮೀಜಿ ಮತ್ತು ನಡುಬೊಟ್ಟು ಕ್ಷೇತ್ರದ ಧರ್ಮದರ್ಶಿ ಶ್ರೀ ರವಿ ನಡುಬೊಟ್ಟು ಅವರ ಮಾರ್ಗದರ್ಶನದಲ್ಲಿ ಬೆಳಗ್ಗೆ 9 ಗಂಟೆಗೆ ಬಿ.ಸಿರೋಡು ರಕ್ತೇಶ್ವರೀ ದೇವಸ್ಥಾನದಿಂದ ವಾಹನ ಜಾಥದ ಮೂಲಕ ಶ್ರೀ ಕ್ಷೇತ್ರ ಪೊಳಲಿಗೆ ಸಾಗಿ ರಜತಹೊದಿಕೆಯ ಸಮರ್ಪಣೆ ನಡೆಯಿತು.
ಶಾಸಕ ರಾಜೇಶ್ ನಾಯ್ಕ್, ಶ್ರೀ ರಾಜರಾಜೇಶ್ವರೀ ಸೇವಾ ಸಮಿತಿಯ ಗೌರವಾಧ್ಯಕ್ಷ ಆರ್ ಕೆ. ಪ್ರಥ್ವಿರಾಜ್ ಎಡಪದವು, ಅಧ್ಯಕ್ಷ ಸುಂದರ ಬಿ. ಬಂಗೇರ ಅದ್ಯಪಾಡಿ, ಪ್ರ. ಕಾರ್ಯದರ್ಶಿ ಪ್ರಮೀಳಾ ಎಂ. ಮಾಣೂರು, ಕೋಶಾಧಿಕಾರಿ ಮೋಹನ್ ಮಳಲಿ, ರಾಘವ ಮಣೇಲ್, ಉಪಾಧ್ಯಕ್ಷರಾದ ಸುಜೀರ್ ಶ್ರೀಧರ್ ಕುಡುಪು, ದಿವಾಕರ ಪಂಬದಬೆಟ್ಟು, ಅನಿಲ್ ದಾಸ್, ನಾರಾಯಣ ಸಿ.ಪೆರ್ನೆ, ಯಶೋಧರ ಪೊಳಲಿ ಕಲ್ಕುಟ, ಚಂದ್ರಹಾಸ್ ಪಲ್ಲಿಪಾಡಿ, ಶಿವಾನಂದ ಮುತ್ತೂರು, ಜೊತೆ ಕಾರ್ಯದರ್ಶಿಗಳಾದ ಭಾರತಿ ಶೇಷಪ್ಪ ತುಂಬೆ, ವಿದ್ಯಾ ಉಮೇಶ್ ಮೂಲ್ಯ, ಗೌರವ ಸಲಹೆಗಾರರಾದ ಸೀತಾರಾಮ ಕುಲಾಲ್ ಮಳಲಿ, ಮಹಾಬಲ ಕುಲಾಲ್, ಸದಾಶಿವ ಬಿಜೈ, ಶಿವಪ್ಪ ಬಂಗೇರ ಅಧ್ಯಪಾಡಿ, ಶ್ರೀಧರ ಪಲ್ಲಿಪಾಡಿ, ಟಿ. ಶೇಷಪ್ಪ ಮೂಲ್ಯ ತುಂಬೆ, ಗೋಪಾಲ ಫರಂಗಿಪೇಟೆ ಹಾಗೂ ಕುಲಾಲ ಸಮಾಜ ಬಾಂಧವರ ಶ್ರೀ ರಾಜರಾಜೇಶ್ವರೀ ಸೇವಾ ಸಮಿತಿಯ ಸರ್ವ ಸದಸ್ಯರು ಮತ್ತು ವಿವಿಧ ಕುಲಾಲ ಸಂಘಗಳಿಂದ ಆಗಮಿಸಿದ ಪ್ರಮುಖರು, ಭಕ್ತರು ಪಾಲ್ಗೊಂಡಿದ್ದರು.