ಮಂಜೇಶ್ವರ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಆಶ್ರಯದಲ್ಲಿ ಮಂಜೇಶ್ವರ ತಾಲೂಕು ಮೀಂಜ ಪಂಚಾಯತಿಗೆ ಒಳಪಟ್ಟ ಮೀಯಪದವು ಹೊನ್ನಕಟ್ಟೆ ಬಳಿ ಕುಲಾಲ ಸಂಘದ ನಿವೇಶನದಲ್ಲಿ ಶ್ರೀ ಧಾಮ ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದ ಯೋಗಿ ಕೌಸ್ತುಭ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯಹಸ್ತದಲ್ಲಿ ಕುಲಾಲ ಸಮಾಜ ಮಂದಿರಕ್ಕೆ ಕೆಸರು ಕಲ್ಲನ್ನು ಹಾಕುವುದರೊಂದಿಗೆ, ಶಿಲ್ಪಿ ಬೇಕೂರು ಧರ್ಮೇಂದ್ರ ಆಚಾರ್ಯರ ದಿವ್ಯ ಹಸ್ತದಲ್ಲಿ ಭೂಮಿ ಪೂಜಾದಿ ಕೈಂಕರ್ಯಗಳು ಇತ್ತೀಚೆಗೆ ನೆರವೇರಿತು.
ಹಿರಿಯರ ಮಾರ್ಗದರ್ಶನದಲ್ಲಿ ಮಂದಿರಕ್ಕಾಗಿ 55 ಸೆಂಟ್ಸ್ ನಿವೇಶನವನ್ನು ಖರೀದಿಸಲಾಯಿತು. ಆರೋಗ್ಯ ಶಿಕ್ಷಣ, ಕ್ರೀಡೆ, ಸಂಸ್ಕೃತಿ, ಕೌಶಲ್ಯಾಭಿವೃದ್ಧಿ ಮುಂತಾದ ಚಟುವಟಿಕೆಗಳನ್ನು ನಡೆಸಲು ಈ ಮಂದಿರ ಸಹಕಾರವಾಗಲಿ, ಮುಂದೆ ಭವ್ಯವಾದ ಮಂದಿರ ಜನ್ಮ ತಾಳಲಿದೆ. ನನ್ನ ಸಹಾಯ ಸಹಕಾರ ಸದಾ ನಿಮಗಿದೆ ಎಂದು ಮಾಣಿಲ ಶ್ರೀಗಳು ಆಶೀರ್ವಚನದಲ್ಲಿ ತಿಳಿಸಿದರು.
ಶಿಲ್ಪಿ ಧರ್ಮೇಂದ್ರ ಆಚಾರ್ಯರು ಮಾತನಾಡಿ ಒಗ್ಗಟ್ಟಾಗಿ ದುಡಿದರೆ ದೇವಿಯ ಅನುಗ್ರಹ ಪ್ರಾಪ್ತಿಯಾಗುವುದೆಂದು ತಿಳಿಸಿದರು. ಮೀಂಜ ಶಾಖೆಯ ಅಧ್ಯಕ್ಷ ಸಂಜೀವ ಬೊಡ್ಡಂಗೋಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಸಂಘದ ಉಪಾಧ್ಯಕ್ಷ ರಾಮ.ಯು, ಕೋಶಾಧಿಕಾರಿ ಆನಂದ ಮಾಸ್ತರ್ ಕೆ.ಎಂ.ಎಸ್.ಎಸ್ ಸದಸ್ಯ ಜಯಂತ ಮಾಸ್ತರ್, ಪೈವಳಿಕೆ ಶಾಖೆಯ ಅಧ್ಯಕ್ಷ ಪೂವಪ್ಪ ಮುನ್ನಿಪ್ಪಾಡಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೇಸ್ತ್ರಿಯವರಾದ ಸುರೇಶ, ಮಹಿಳಾ ಅಧ್ಯಕ್ಷೆ ಹೇಮಲತ, ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ಸರ್ವೇಯರ್, ಕೋಶಾಧಿಕಾರಿ ಸುರೇಶ್ ಮಾಸ್ತರ್ ಶುಭ ಹಾರೈಸಿದರು. ಮಾಜಿ ಜಿಲ್ಲಾ ಸಂಘದ ಅಧ್ಯಕ್ಷ ರಾಮಚಂದ್ರ ಮಾಸ್ತರ್ ಸ್ವಾಗತಿಸಿ, ದುರ್ಗಾಪ್ರಸಾದ್ ವಂದಿಸಿದರು. ಮಾಜಿ ಜಿಲ್ಲಾ ಸಂಘದ ಅಧ್ಯಕ್ಷ ದಾಮೋದರ ಮಾಸ್ತರ್ ಕಬ್ಬಿನ ಹಿತ್ತಿಲು ಕಾರ್ಯಕ್ರಮ ನಿರೂಪಿಸಿದರು.