ಬೀದರ್(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ಜಾನಪದ ಪರಿಷತ್ತು ಕೊಡಮಾಡುವ ರಾಜ್ಯಮಟ್ಟದ ಜಾನಪದ ಲೋಕೋತ್ಸವ ಪ್ರಶಸ್ತಿಗೆ ವೀರಣ್ಣ ಕುಂಬಾರ ಭಾಲ್ಕಿ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಪ್ರಶಸ್ತಿಯು ರೂ. 10 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ, ಫಲಕ ಒಳಗೊಂಡಿರುತ್ತದೆ. ಫೆ. ರಂದು, ರಾಮನಗರ ಜಾನಪದ ಲೋಕದಲ್ಲಿ ಜರುಗುವ ಲೋಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ವೀರಣ್ಣ ಕುಂಬಾರ ಅವರು ನೂರಾರು ತತ್ವಪದಗಳು, ಶರಣರ ವಚನಗಳು, ಕೀರ್ತನೆಗಳು ಸುಶ್ರಾವ್ಯವಾಗಿ ಹಾಡಿ ಜನಮನ ತಣಿಸಿರುತ್ತಾರೆ. ಅನೇಕ ಕಡೆಗಳಲ್ಲಿ ಯಶಸ್ವಿಯ ಕಾರ್ಯಕ್ರಮಗಳು ನೀಡಿರುತ್ತಾರೆ. ಬೀದರ ಜಿಲ್ಲಾ ಗ್ರಾಮ ಚರಿತ್ರೆಕೋಶ ಮತ್ತು ತತ್ವಪದಗಳ ಸಂಗ್ರಹ ಯೋಜನೆ ಅಡಿಯಲ್ಲಿ ಕ್ಷೇತ್ರ ಸಹಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಕಲಾ ಸೇವೆಯನ್ನು ಪರಿಗಣಿಸಿ 2018-19ನೇ ಸಾಲಿನ ಜಾನಪದ ಲೋಕೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತು ಹೈದ್ರಾಬಾದ ಕರ್ನಾಟಕ ಪ್ರದೇಶದ ಸಂಯೋಜಕರಾದ ಡಾ. ಜಗನ್ನಾಥ ಹೆಬ್ಬಾಳೆ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.